ಮೂಡುಬಿದಿರೆ: ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು, ಕರಿಂಜೆ, ಮಾರೂರು ಇದರ 25ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ರಜತ ಸಂಭ್ರಮ ಲೋಗೋ ಬಿಡುಗಡೆ ಕಾರ್ಯಕ್ರಮ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‌ನ ಅಕ್ಷಯಧಾಮ ಸಭಾಭವನದಲ್ಲಿ ನಡೆಯಿತು.

ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆಯ ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರು ಆಮಂತ್ರಣ ಪತ್ರಿಕೆ ಹಾಗೂ ರಜತ ಸಂಭ್ರಮ ಲೋಗೋ ಬಿಡುಗಡೆ ನೆರವೇರಿಸಿದರು.

ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಟ್ರಸ್ಟಿ ಶ್ರೀಪತಿ ಭಟ್ ಹಾಗೂ ಟ್ರಸ್ಟಿಗಳು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಬೈಲೂರು, ಕಾರ್ಯದರ್ಶಿ ಪ್ರಮೋದ್ ಆಚಾರ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸ್ವರ್ಣ ಗೌರಿ ಮಾತೃಮಂಡಳಿಯ ಅಧ್ಯಕ್ಷ ಶಕುಂತಲಾ ರಾಮಚಂದ್ರ ರಾವ್, ಕಾರ್ಯದರ್ಶಿ ವೀಣಾ ಸುರೇಶ್ ಪೈ ಹಾಗೂ ಸದಸ್ಯರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.