ಮೂಡುಬಿದಿರೆ: ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ನಾಗರ ಪಂಚಮಿ ಆಚರಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಾಗದೇವರಿಗೆ ಹಾಲಾಭಿಷೇಕ, ಸಿಯಾಳಾಭಿಷೇಕ, ತನು ತಂಬಿಲ ಸಮರ್ಪಣೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.
ವೇದಮೂರ್ತಿ ಪ್ರಭಾಕರ ಭಟ್ ಮಂಗಳೂರು ಅವರ ಪೌರೋಹಿತ್ಯದಲ್ಲಿ ನಾಗರ ಪಂಚಮಿ ಆಚರಣೆ ಜರಗಿತು. ಈ ಬಾರಿ ನಾಗದೇವರ ಬಿಂಬಗಳನ್ನು ಮನೆಯಲ್ಲಿಯೇ ಬೆಳೆದ ಹೂಗಳಿಂದ ಅಲಂಕರಿಸಲಾಯಿತು. ನಾಗಬನದ ಅಲಂಕಾರಕ್ಕೆ ಹೊರಗಿನಿಂದ ಬಂದ ಹೂಗಳನ್ನು ಬಳಸಲಾಯಿತು.
ಪರಿಸರ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ನಾಗರ ಪಂಚಮಿ ಆಚರಣೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ನಡೆಸಲಾಯಿತು.