ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಸಮಾಜ ಮಂದಿರದಲ್ಲಿ ಸೆ.14ರಿಂದ 18ರವರೆಗೆ ನಡೆಯಲಿರುವ ಮೂಡುಬಿದಿರೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ತ್ರೀರೋಗ ತಜ್ಞ ಡಾ. ರಮೇಶ್ ಹಾಗೂ ಉದ್ಯಮಿ ಜಯರಾಮ್ ಕೋಟ್ಯಾನ್ ಸೋಮವಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.

ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ., ಚೌಟರ ಅರಮನೆಯ ಕುಲದೀಪ್ ಎಂ., ಪುತ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಪ್ರಮುಖರಾದ ರಾಜರಾಮ್ ನಾಗರಕಟ್ಟೆ, ಕೊರಗ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಗಂಗಾಧರ ಎಂ., ಲಕ್ಷ್ಮಣ ಪೂಜಾರಿ, ಟ್ರಸ್ಟಿ ನವೀನ್ ಕರ್ಕೇರ, ಪ್ರಮುಖರಾದ ಪ್ರಶಾಂತ್ ಭಂಡಾರಿ, ಪ್ರಸನ್ನ ಎಸ್., ಚೇತನ್ ಪೇಟೆಮನೆ ಉಪಸ್ಥಿತರಿದ್ದರು.