ಮೂಡುಬಿದಿರೆ: ಕಥೊಲಿಕ್ ಸಭಾ ಶಿರ್ತಾಡಿ ಘಟಕದ 30ನೇ ವರ್ಷಾಚರಣೆ ಅಂಗವಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಯೋಜನೆಯ ಸಹಾಯಾರ್ಥವಾಗಿ ‘ವಾಗಾಂಚೊ ಖೆಳ್’ ಕೊಂಕಣಿ ಚಲನಚಿತ್ರವನ್ನು ಹೋಲಿ ಏಂಜಲ್ಸ್ ಕನ್ನಡ ಮಾಧ್ಯಮ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ಸಿಲ್ವೆಸ್ಟರ್ ವಿನ್ಸೆಂಟ್, ‘ಹೆಲಿಂಗ್ ಹ್ಯಾಂಡ್ಸ್ ಶಿರ್ತಾಡಿ’ ಅಧ್ಯಕ್ಷ ಜೇಸನ್ ಪಿರೇರಾ ಅವರಿಗೆ 50,000 ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು.
ಚಲನಚಿತ್ರ ನಿರ್ಮಾಪಕಿ ಸೀಮಾ ಫೆರ್ನಾಂಡಿಸ್, ಕಥೊಲಿಕ್ ಸಭಾ ಶಿರ್ತಾಡಿ ಘಟಕದ ಅಧ್ಯಕ್ಷ ಹೆರಾಲ್ಡ್ ಡಿಸಿಲ್ವಾ, ಚರ್ಚ್ ಪಾಲನ ಮಂಡಳಿ ಅಧ್ಯಕ್ಷ ಆಸ್ಟಿನ್ ಡೇಸಾ, ಆಯೋಗಗಳ ಸಂಯೋಜಕರಾದ ವಿಲೈಡ್ ಪಿಂಟೊ ಹಾಗೂ ಸ್ಟೀವನ್ ಡಿ'ಸೋಜಾ ಉಪಸ್ಥಿತರಿದ್ದರು. ಹೆರಾಲ್ಡ್ ಡಿಸಿಲ್ವಾ ಸ್ವಾಗತಿಸಿದರು. ಪ್ರೀತಿ ಪೇರಿಸ್ ವಂದಿಸಿದರು. ನೆಲ್ಸನ್ ಪಿಂಟೊ ಕಾರ್ಯ ನಿರ್ವಹಿಸಿದರು.