ಮೂಡುಬಿದಿರೆ: ಬೆಳ್ತಂಗಡಿ ತಾಲೂಕಿನ ಪೆರಿಂಜೆ ಗ್ರಾಮದ ಶ್ರೀ ಕ್ಷೇತ್ರ ಪಡ್ಡಾರಬೆಟ್ಟು ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ಹೂವಿನ ಪೂಜೆ, ಅನ್ನಸಂತರ್ಪಣೆ, ಆಟಿದ ಕೋಲ ಹಾಗೂ ತುಲಾಭಾರ ಸೇವೆ ನಡೆಯಿತು.

ದಿನದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಹೂವಿನ ಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಬಳಿಕ ರಾತ್ರಿ 7.30ರಿಂದ ಆಟಿದ ಕೋಲ ಹಾಗೂ ತುಲಾಭಾರ ಸೇವೆ ನಡೆಯಿತು. ಈ ಕುರಿತು ಅನುವಂಶೀಯ ಆಡಳಿತದಾರ ಎ. ಜೀವಂಧರ್ ಕುಮಾರ್ ಯಾನೆ ಕಂಚಿಪೂವಣಿ ತಿಳಿಸಿದ್ದಾರೆ.