ಮೂಡುಬಿದಿರೆ: ಬೆಳುವಾಯಿ ಮುಡಾಯಿಕಾಡು ಶ್ರೀ ನಾಗದೇವರ ಸನ್ನಿಧಿಯಲ್ಲಿ ತನು ತಂಬಿಲ ಸೇವೆ, ದೇವಸ್ಥಾನದಲ್ಲಿ ಹೂವಿನ ಪೂಜೆ ಸೇರಿದಂತೆ ವಿವಿಧ ದೇವತಾ ಸೇವೆಗಳ ಪೂಜೆ ನೆರವೇರಿಸಲಾಯಿತು. ಪೂಜಾ ಸಾಹಿತ್ಯ ಒದಗಿಸಿ ಪೂರ್ಣ ಸಹಕಾರ ನೀಡಿದ ಊರ ಹಾಗೂ ಪರಊರ ಭಗವತ್ಭಕ್ತರಿಗೆ ಶ್ರೀ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಮುಂದಿನ ವಾರದಿಂದ ದೇವಸ್ಥಾನ ನಿರ್ಮಾಣದ ಕೆಲಸಕಾರ್ಯಗಳು ಆರಂಭಗೊಳ್ಳಲಿವೆ. ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಭಕ್ತರು ಸಹಕರಿಸುವಂತೆ ಟ್ರಸ್ಟ್ ವಿನಂತಿಸಿದೆ.
ಶ್ರೀ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಎಂ. ದೇವಾನಂದ ಭಟ್, ಗೌರವ ಸಲಹೆಗಾರ ಚಂದ್ರ ಶೇಖರ್ ರಾವ್ ಬೊಕ್ಕಸ, ದೇವಸ್ಥಾನ ಅರ್ಚಕ ವೇ. ಮೂ. ಶ್ರೀರಾಮ್ ಭಟ್ ಬೆಳುವಾಯಿ, ಟ್ರಸ್ಟ್ ಕೋಶಾಧಿಕಾರಿ ಸಂದೀಪ್ ಶೆಟ್ಟಿ, ಸಂಚಾಲಕ ಸೂರಜ್ ಆಳ್ವಾ, ನಿರ್ದೇಶಕರಾದ ಸುಭಾಸ್ ಜೈನ್, ರೋಷನ್ ಶೆಟ್ಟಿ, ವಿಜಯ ಪೂಜಾರಿ, ವಿಠ್ಠಲ್ ಅರ್ಜುನ್, ದೇವಸ್ಥಾನ ನಿರ್ಮಾಣ ನಿರ್ವಾಹಕ ಅಭಿಲಾಷ್ ಶೆಟ್ಟಿ ಕಟೀಲ್ ಸಹಿತ ಭಕ್ತರು ಭಾಗವಹಿಸಿದ್ದರು.