ಮೂಡುಬಿದಿರೆ: ಬೆಳುವಾಯಿ ಗ್ರಾಮದ ಶ್ರೀ ಕುಕ್ಕಿನಂತ್ತಾಯ, ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ-ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ದೈವಸ್ಥಾನದ ಕಲ್ಲೋಳಿ ಪಾದೆ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಗುಡ್ಜಿ ನೇಮ ನಡೆಯಿತು. ಗ್ರಾಮಸ್ಥರ ಸಹಭಾಗಿತ್ವದಲ್ಲಿ 45 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಧಾರ್ಮಿಕ ಕಾರ್ಯಕ್ರಮ ಸಂಘಟಿತವಾಗಿತ್ತು. ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಲಾದ ವಿಶಾಲ ಚಪ್ಪರ ಹಾಗೂ ನಾಲ್ಕು ಕಂಬಗಳ ಒಂಬತ್ತು ಅಂತಸ್ತುಗಳ ಗುಡ್ಜಿ ಎಲ್ಲರ ಗಮನ ಸೆಳೆಯಿತು. ನೇಮೋತ್ಸವಕ್ಕಾಗಿ ದೈವಗಳ ಹೊಸ ಮಂಚ ಸೇರಿದಂತೆ ಎಲ್ಲ ಹೊಸ ಪರಿಕರಗಳನ್ನು ಬಳಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಬೆಳಿಗ್ಗೆ ದೈವಗಳ ಭಂಡಾರ ಆಗಮನವಾದ ನಂತರ ಗಣಪತಿ ಹೋಮ ನೆರವೇರಿತು. ರಾತ್ರಿ ರಾಜನ್ದೈವಗಳಾದ ಕುಕ್ಕಿನಂತಾಯಿ, ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮ ಕಾರ್ಯಗಳು ನಡೆದವು. ಗುತ್ತಿನಾರ್ ನರೇಶ್ ಶೆಟ್ಟಿ ಬರಕಳಗುತ್ತು ನೇತೃತ್ವದಲ್ಲಿ ಜರಗಿತು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.