ಮೂಡುಬಿದಿರೆ: ಕಡಂದಲೆ ವಿದ್ಯಾಗಿರಿಯ ಶಾಲೆಯ ಸಮೀಪವಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ನಲ್ಲಿ ಭಾನುವಾರ ಕಾಣಿಸಿಕೊಂಡ ಬೆಂಕಿ ಕಿಡಿಯಿಂದಾಗಿ ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಕಿ ಹಬ್ಬಿದೆ. ಶನಿವಾರ ಮಧ್ಯಾಹ್ನ ಪಾಲಡ್ಕ ಬಿ.ಟಿ. ರಸ್ತೆಯ ವಿದ್ಯುತ್ ತಂತಿಯಿಂದ ಹಾರಿದ ಕಿಡಿಯು ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿಯಾಗುತ್ತಿದ್ದಂತೆ ಕಿಡಿಗಳು ಮತ್ತಷ್ಟು ಪಸರಿಸಿ, ಜನವಸತಿ ಪ್ರದೇಶದವರೆಗೂ ಬೆಂಕಿ ಆವರಿಸಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಾಥ್ ನೀಡಿದರು. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಕಿ ಮನೆಗಳಿಗೆ ಹರಡುವುದು ತಪ್ಪಿದ್ದು, ಸಂಭವನೀಯ ಭಾರಿ ಅನಾಹುತವೊಂದು ದೂರವಾದಂತಾಗಿದೆ. ವಿದ್ಯುತ್ ತಂತಿ ಹಾಗೂ ಟ್ರಾನ್ಸ್ಫಾರ್ಮರ್ ಬಳಿ ಸಂಚರಿಸುವಾಗ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಅಗ್ನಿಶಾಮಕದಳದವರು ಸಲಹೆ ನೀಡಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಆಗಸ್ಟ್ 23ರಿಂದ ಪ್ರತಿ ಭಾನುವಾರ ದೀಪಾಲಂಕಾರದಲ್ಲಿ ಕಂಗೊಳಿಸಲಿದೆ ಸಾವಿರ ಕಂಬದ ಬಸದಿ: ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ
ಮೂಡುಬಿದಿರೆ: ಜೈನ ಕಾಶಿಯ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯು ಆಗಸ್ಟ್ 20ರಿಂದ ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಜೈನ್ ಕಾಶಿ ಟ್ರಸ್ಟ್ ತಿಳಿಸಿದೆ.
ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ
ಮಂಗಳೂರು : ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಶುಕ್ರವಾರ ಕೊಟ್ಟಾರ ಚೌಕಿಯ ಪ್ರೀತಿರಾಜ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನಡೆಯಿತು.
ವೈದಿಕ ಸಂಪ್ರದಾಯ ಉಳಿವಿಗೆ ಮೂಡುಬಿದಿರೆಯಲ್ಲಿ ಪುರೋಹಿತರ ಸಮಾವೇಶ
ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜನಪದ ಶಾಖಾ ವಿಶ್ವ ವೈದಿಕ ಸಭಾ ವತಿಯಿಂದ 14ನೇ ವರ್ಷದ ಪುರೋಹಿತ ಸಮ್ಮೇಳನವು ಮೂಡುಬಿದಿರೆ ಶ್ರೀ ಶ್ರೀ ಶ್ರೀ ಅಯ್ಯಸ್ವಾಮೀ ಮಠದ ಎದುರು ಪಾಲ್ಕೆ ಇಂದಿರಾ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆಯಿತು.