ಮೂಡುಬಿದಿರೆ: ಬನ್ನಡ್ಕದಲ್ಲಿ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಆಟೋ ಚಾಲಕ ಜಾನ್ ಕೊರೆಯಾ ಮೃತಪಟ್ಟಿದ್ದಾರೆ.

75 ವರ್ಷದ ಜಾನ್ ಕೊರೆಯಾ ಇತ್ತೀಚೆಗೆ ಮಹಾವೀರ ಕಾಲೇಜು ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ತಪ್ಪಿಲ್ಲದಿದ್ದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದರು. ಈ ಕುರಿತು ಭಾನುವಾರ ಬೆಳಗ್ಗೆ ಅಲಂಗಾರಿನಲ್ಲಿರುವ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದರು. ಜೀವನವೇ ಬೇಸರವಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದ ಅವರು, ಅದಾದ ಕೆಲವೇ ಗಂಟೆಗಳಲ್ಲಿ ಬನ್ನಡ್ಕದಲ್ಲಿ ನಡೆದ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಮೂಡುಬಿದಿರೆ:ಬನ್ನಡ್ಕದಲ್ಲಿ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಆಟೋ ಚಾಲಕ ಜಾನ್ ಕೊರೆಯಾ ಮೃತಪಟ್ಟಿದ್ದಾರೆ. 75 ವರ್ಷದ ಜಾನ್ ಕೊರೆಯಾ ಇತ್ತೀಚೆಗೆ ಮಹಾವೀರ ಕಾಲೇಜು ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ತಪ್ಪಿಲ್ಲದಿದ್ದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದರು. ಈ ಕುರಿತು ಭಾನುವಾರ ಬೆಳಗ್ಗೆ ಅಲಂಗಾರಿನಲ್ಲಿರುವ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದರು. ಜೀವನವೇ ಬೇಸರವಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದ ಅವರು, ಅದಾದ ಕೆಲವೇ ಗಂಟೆಗಳಲ್ಲಿ ಬನ್ನಡ್ಕದಲ್ಲಿ ನಡೆದ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ತಮ್ಮ 18ನೇ ವಯಸ್ಸಿನಿಂದಲೇ ಆಟೋ ಚಾಲಕರಾಗಿ ವೃತ್ತಿ ಆರಂಭಿಸಿದ್ದ ಜಾನ್ ಕೊರೆಯಾ ಶ್ರಮಜೀವಿ ಹಾಗೂ ಸ್ನೇಹಜೀವಿಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.