ಮೂಡುಬಿದಿರೆ: ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸ್ಪಾರ್ಕ್-2026’ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಧವಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟು ಎಂಟು ಕಾಲೇಜುಗಳ ನಡುವೆ ನಡೆದ ಈ ಪೈಪೋಟಿಯಲ್ಲಿ ಧವಲಾ ಕಾಲೇಜು ತಂಡವು ಗಮನಾರ್ಹ ಪ್ರದರ್ಶನ ನೀಡಿದೆ. ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡವು, ಸಾಮೂಹಿಕ ನೃತ್ಯ ಸ್ಪರ್ಧೆ ಹಾಗೂ ಮ್ಯಾಡ್ ಆ್ಯಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ರೀಲ್ಸ್ ಮೇಕಿಂಗ್ ಸ್ಪರ್ಧೆಯಲ್ಲಿ ಯಶ್ ರಾಜ್ ಮತ್ತು ಪವನ್ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾರ್ಪೊರೇಟ್ ಸ್ಪಾರ್ಕ್ ವಿಭಾಗದಲ್ಲಿ ಪೂರ್ವಿಕ್ ಹಾಗೂ ಎಂ.ಎಸ್ ಕಾರ್ಪೊರೇಟ್ ಸ್ಪಾರ್ಕ್ ವಿಭಾಗದಲ್ಲಿ ವೀಕ್ಷಿತಾ ಸಾಧನೆ ತೋರಿದ್ದು, ಕಾಲೇಜಿನ ಒಟ್ಟಾರೆ ಸಾಧನೆಗಾಗಿ ಸಮಗ್ರ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.