ಮೂಡುಬಿದಿರೆ: ಬೆಳುವಾಯಿ ಸಮೀಪದ ಕೆಸರುಗದ್ದೆ ವಾಸಪ್ಪ ಹೋಟೆಲ್ ಮುಂಭಾಗದ ಕ್ರಾಸ್‌ನಲ್ಲಿ ಕಿಯಾ ಕಾರು ಹಾಗೂ ತೂಫಾನ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
ಕಿಯಾ ಕಾರು ಮೂಡುಬಿದಿರೆ ಕಡೆಗೆ ತೆರಳುತ್ತಿದ್ದಾಗ, ಮೂಡುಬಿದಿರೆಯಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ತೂಫಾನ್ ವಾಹನ ಡಿಕ್ಕಿಯಾಗಿದೆ. ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.