ಮೂಡುಬಿದಿರೆ: ಬನ್ನಡ್ಕ- ಕೆಸರ್ಗದ್ದೆ ರಸ್ತೆಯಲ್ಲಿ ಸೋಮವಾರ ಸಂಜೆ ಕಾರು ಮತ್ತು ಪಿಕ್‌ಅಪ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಚಾಲಕನು ಪಿಕ್‌ಅಪ್ ವಾಹನವನ್ನು ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಹೈವೇಯಲ್ಲಿ, ಬಂದ ಕಾರು, ಪಿಕ್‌ಅಪ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದೆ. ಕಳೆದ ಒಂದು ವಾರದೊಳಗೆ ಆರು ಅಪಘಾತ ಸಂಭವಿಸಿವೆ.