ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮರಿಯಾಡಿ ಪರಿಸರದಲ್ಲಿ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಚಾವಣಿ ಹಾನಿಗೊಳಗಾಗಿವೆ. ಸ್ಥಳೀಯ ನಿವಾಸಿಗಳಾದ ಆಜೀಜ್ ಹಾಗೂ ಗಣೇಶ್ ಅವರ ವಾಸ್ತವ್ಯದ ಮನೆಯ ಮೇಲ್ಚಾವಣಿಗಳು ಮಳೆಯ ಆರ್ಭಟಕ್ಕೆ ಸಂಪೂರ್ಣ ಹಾನಿಯಾಗಿವೆ. ಮರಿಯಾಡಿಯ ದಿನೇಶ್ ಅವರ ಮನೆಯ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿ ಹೋಗಿದೆ. ಇದೇ ಪರಿಸರದ ಚಂದ್ರಶೇಖರ ಆಚಾರ್ಯ ಅವರ ಮನೆಯ ಹಂಚುಗಳು ಪುಡಿಯಾಗಿದ್ದು, ಅಮಿತಾ ಶೆಟ್ಟಿ ಅವರ ಮನೆಯ ಹಂಚು ಹಾಗೂ ಸಿಮೆಂಟ್ ಶೀಟುಗಳಿಗೆ ಹಾನಿ ಸಂಭವಿಸಿದೆ.
ಗಾಳಿ ಮಳೆ: ಮಾರ್ಪಾಡಿ ಗ್ರಾಮದ ಮರಿಯಾಡಿಯ ಐದು ಮನೆಗಳಿಗೆ ಹಾನಿ
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮರಿಯಾಡಿ ಪರಿಸರದಲ್ಲಿ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಚಾವಣಿ ಹಾನಿಗೊಳಗಾಗಿವೆ.