ಮೂಡುಬಿದಿರೆ: ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಆಕಸ್ಮಿಕವಾಗಿ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಹಂಚಿನ ಛಾವಣಿ ಜಖಂಗೊಂಡಿದೆ

ಲೀಲಾ ರಾಜು ಎಂಬುವವರಿಗೆ ಸೇರಿದ ಮನೆಗೆ ಈ ಹಾನಿ ಸಂಭವಿಸಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿಯ ಹಂಚುಗಳು ಪುಡಿಯಾಗಿದ್ದು, ಗೋಡೆಗೂ ಹಾನಿಯಾಗಿದೆ.