ಮೂಡುಬಿದಿರೆ: ಇರುವೈಲು ಹೊಸಮರಾಯ ಪದವು ಬಿಳಿಕಲ್ಲುಗುಡ್ಡ ಮಾಡದಲ್ಲಿ ನವೀಕರಣಗೊಂಡ ನೂತನ ಶಿಲಾಮಯ ಮಾಡದಲ್ಲಿ ಶ್ರೀ ಹೊಸಮರಾಯ ದೈವದ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಪಂಚಪರ್ವ ನೇಮೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇರುವೈಲು ದೇವಳದ ಐ. ರಾಘವೇಂದ್ರ ಆಸ್ರಣ್ಣರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನರರವೇರಿದವು. ಶುಕ್ರವಾರ ಗಣಯಾಗ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ಆಶ್ಲೇಷ ಬಲಿ, ವಟು ಆರಾಧನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ನಂತರ ಕುವೆಸ್ಥಳ ಬಾಳಿಕೆಯಿಂದ ದೈವದರ್ಶನ ಹೊರಟು, ನೂತನ ಮಾಡದಲ್ಲಿ ದೈವ ಪ್ರತಿಷ್ಠೆ ಹಾಗೂ ಭಂಡಾರ ಪ್ರತಿಷ್ಠೆ ನೆರವೇರಿಸಲಾಯಿತು. ಪ್ರತಿಷ್ಠಾಪನೆಯ ನಂತರ ಕಲಶಾಭಿಷೇಕ, ಪಂಚಪರ್ವ, ಪ್ರಸನ್ನ ಪೂಜೆ, ಪಲ್ಲ ಪೂಜೆ ಹಾಗೂ ಶ್ರೀ ಹೊಸಮರಾಯ ದೈವದ ವೈಭವದ ನೇಮೋತ್ಸವ ಜರುಗಿತು. ಗುತ್ತುಬಾಳಿಕೆ ಮನೆತನದವರು, ಕುವೆಸ್ಥಳ ಬಾಳಿಕೆಯವರು, ಹೊಸಮರಾಯ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.