ಮೂಡುಬಿದಿರೆ: ಬನ್ನಡ್ಕ ಸಮೀಪದ ಫ್ಲೈಓವರ್ ಮೇಲೆ ಬೈಕ್ ಮತ್ತು ಹೆದ್ದಾರಿ ಕಾಮಗಾರಿಯ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪೆನಿಗೆ ಸೇರಿದ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಬನ್ನಡ್ಕದ ಈ ಪ್ರದೇಶವು ಈಗಾಗಲೇ ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿದ್ದು, ಕಾಮಗಾರಿ ವಾಹನಗಳ ಅತಿವೇಗ ಹಾಗೂ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳೀಯರು ಅಪಘಾತ ವಲಯದಲ್ಲಿ ಹೆದ್ದಾರಿ ಕಾಮಗಾರಿ ವಾಹನಗಳ ಸಂಚಾರದ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಿದ್ದಾರೆ.