ಮೂಡುಬಿದಿರೆ: ನೆಲ್ಲಿಕಾರಿನ ಆಲ್ ಬದ್ರಿಯಾ ಚಿಕನ್ ಸ್ಟಾಲ್‌ನಲ್ಲಿ ಅನಧಿಕೃತವಾಗಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿದರು.
ದಾಳಿಯ ವೇಳೆ ಅಂಗಡಿ ಮಾಲೀಕ ಅಬೂಬಕ್ಕರ್ ಅವರನ್ನು ವಶಕ್ಕೆ ಪಡೆದು, ಸುಮಾರು 2 ಕೆ.ಜಿ. ದನದ ಮಾಂಸವನ್ನು ಜಪ್ತಿ ಮಾಡಲಾಗಿದೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.