ಮೂಡುಬಿದಿರೆ: ಮಾವಿನ ಕಾಯಿಗಳನ್ನು ಕೀಳಲು ಮರವೇರಿದ್ದ ವೃದ್ಧರೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆಯು ಮಾಸ್ತಿಕಟ್ಟೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮಾಸ್ತಿಕಟ್ಟೆಯ ನಿವಾಸಿ ಶಿವರಾಮ್ ಶೆಟ್ಟಿ (85) ಮೃತಪಟ್ಟವರು. ಮಾವಿನ ಕಾಯಿ ವ್ಯಾಪಾರ ಮಾಡುತ್ತಿದ್ದ ಶಿವರಾಮ್ ಶೆಟ್ಟಿ, ತಮ್ಮ ಮನೆಯ ಸಮೀಪದ ಮರದಿಂದ ಕಾಯಿಗಳನ್ನು ಕೀಳಲು ಮರವೇರಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಸಂಜೆ ವೇಳೆಗೆ ಮರದ ಕೆಳಗೆ ಬಿದ್ದಿದ್ದ ಅವರ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ವಿಷಯ ತಿಳಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಮಾವಿನ ಕಾಯಿಗಳನ್ನು ಸಂಗ್ರಹಿಸಿ ಕೆಳಕ್ಕೆ ಇಳಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ಏಣಿಗಳನ್ನು ಜೋಡಿಸಿ ಮರಕ್ಕೆ ಹತ್ತಿದ್ದ ಶಿವರಾಮ್ ಶೆಟ್ಟಿ, ಹಿಂದೆ ಟೂರಿಸ್ಟ್ ವಾಹನ ಹಾಗೂ ಆಟೋ ಚಾಲಕರಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾವಿನ ಕಾಯಿ ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದರು. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.