ಮೂಡುಬಿದಿರೆ: ಬನ್ನಡ್ಕ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಅವರ ಮನೆಯ ಅಂಗಳಕ್ಕೆ ಚಿರತೆ ಕಂಡುಬಂದಿದೆ.

ರಾತ್ರಿಯ ವೇಳೆಯಲ್ಲಿ ನಿತಿನ್ ಕೋಟ್ಯಾನ್ ಅವರ ಮನೆಯ ಆವರಣಕ್ಕೆ ನುಗ್ಗಿದ ಚಿರತೆಯ ಸಂಪೂರ್ಣ ಚಲನವಲನಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಂಗಳದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಚಿರತೆಯು ನಿರಾತಂಕವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ.