ಮೂಡುಬಿದಿರೆ: ಇಲ್ಲಿನ ಇನ್ನರ್ ವೀಲ್ ಕ್ಲಬ್ ಸ್ಥಾಪಕ ಸದಸ್ಯೆ, ಮಾಜಿ ಅಧ್ಯಕ್ಷೆ ಪೆರಿಂಜೆಗುತ್ತು ರಸಿಕಾ ಕಂಬಳಿ( 67) ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಜೈನ್ ಮಿಲನ್ ವಲಯ ನಿರ್ದೇಶಕ ಜಯರಾಜ್ ಕಂಬಳಿ ಅವರ ಪತ್ನಿಯಾಗಿರುವ ಅವರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ರಸಿಕಾ ಅವರು ಜೈನ್ ಮಿಲನ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.