ಮೂಡುಬಿದಿರೆ: ಬೆಳುವಾಯಿ ಕುಕ್ಕಿನಾಡಿಯ ನಿವಾಸಿ, ನಡ್ಯೋಡಿ ಬೈದರ್ಕಳ ಗರಡಿಯ ದೈವ ಮುಕ್ಕಾಲ್ದಿ ರತ್ನಾಕರ ಪೂಜಾರಿ (56) ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರತ್ನಾಕರ ಪೂಜಾರಿ ಸ್ಥಳೀಯವಾಗಿ ಧಾರ್ಮಿಕ ಕ್ಷೇತ್ರದಲ್ಲಿ ದೈವ ಮುಕ್ಕಾಲ್ದಿಯಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದರು.