ರೋಟರಿ ಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ ಚುನಾವಣೆ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಯಿತು. ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ತಿಲಕಾ ಅನಂತವೀರ್ ಜೈನ್ ಕಾರ್ಯನಿರ್ವಹಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ, ವಿಭಾಗ ಸಂಯೋಜಕ ಶಿಕ್ಷಕರಾದ ಡೀಲನ್ ಮಸ್ಕರೇನ್ಹಸ್, ಸರಿತಾ ಜೆ ಅವರ ಮೇಲ್ವಿಚಾರಣೆಯಲ್ಲಿ ಮತದಾನ ನಡೆಯಿತು.
ಭಾರತಿ ಮತ್ತು ರೇಖಾ ವೆಂಕಟೇಶ್ ತಯಾರಿಸಿದ ಇವಿಎಂ ಯಂತ್ರವನ್ನು ಬಳಸಲಾಯಿತು. ಪ್ರೇಮಲತಾ, ವಿದೀಪ್, ನಿಶಾ ಮತ್ತು ಅಶ್ವಿನಿ ಸಂಸತ್ತಿನ ಮೇಲ್ವಿಚಾರಕ ಶಿಕ್ಷಕರು ಹಾಗೂ ಚುನಾವಣಾಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸಿದರು.
ಮತದಾನದ ಫಲಿತಾಂಶದಲ್ಲಿ ಪ್ರೌಢಶಾಲಾ ವಿಭಾಗದ ಶಾಲಾ ನಾಯಕಿಯಾಗಿ ಜೆನಿಲಿಯ ಪಿಂಟೋ, ಉಪನಾಯಕನಾಗಿ ಬಿ. ಪುನೀತ್ ಶೆಟ್ಟಿ, ಸ್ಪೀಕರ್ ಆಗಿ ವೆಲೋನಿ ಕಾರ್ಡೋಜಾ ಹಾಗೂ ವಿರೋಧ ಪಕ್ಷದ ನಾಯಕರಾಗಿ ಸಿದ್ದಾರ್ಥ್ ಆಯ್ಕೆಯಾದರು. ಹಿರಿಯ ಪ್ರಾಥಮಿಕ ವಿಭಾಗದ ಶಾಲಾ ನಾಯಕಿಯಾಗಿ ಪ್ರತ್ಯುಶ, ಉಪ ಶಾಲಾ ನಾಯಕನಾಗಿ ಕ್ಷಿತಿಜ್, ಸ್ಪೀಕರ್ ಆಗಿ ಅನಮ್ ಅಶ್ರಫ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಸಫ ಫಾತಿಮಾ ಆಯ್ಕೆಯಾದರು. ಪ್ರೇಮಲತಾ, ವಿದೀಪ್, ನಿಶಾ, ಅಶ್ವಿನಿ, ಶಿಕ್ಷಕರು ಉಪಸ್ಥಿತರಿದ್ದರು.