ಮೂಡುಬಿದಿರೆ: ಅಗರಿ ಎಂಟರ್ಪ್ರೆಸಸ್ ವತಿಯಿಂದ ಆಯೋಜಿಸಲಾದ ಹಬ್ಬಹಬ್ಬಗಳ ಉತ್ಸವ ಪ್ರತಿದಿನ ಒಂದು ಬಹುಮಾನ 100 ದಿನ 100 ಬಹುಮಾನ ಸರಣಿ ಕಾರ್ಯಕ್ರಮದ 9ನೇ ಹಂತದ ಬಂಪರ್ ಡ್ರಾ ಮೂಡುಬಿದಿರೆ ಗಾಂಧಿನಗರ ಶಾಖೆಯಲ್ಲಿ ನಡೆಯಿತು. ದ.ಕ ಜಿಲ್ಲಾ ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಕರಾದ ವಿಶ್ವನಾಥ ಎಂ.ಶೆಣೈ., ಮೂಡುಬಿದಿರೆ ಶಾಲೆಯ ಶಿಕ್ಷಕಿ ಮೇಘಾ, ಸಚ್ಚರಿಪೇಟೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸತ್ಯ ಶಂಕರ್ ಶೆಟ್ಟಿ, ವೇಣೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಜಾತ, ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದ ಡಾ.ಯೋಗಿ ಸುಧಾಕರ ತಂತ್ರಿ, ಆಳ್ವಾಸ್ ಸಂಸ್ಥೆಯ ಫೈನಾನ್ಸ್ ಆಫೀಸರ್ ಶಾಂತರಾಮ ಕಾಮತ್, ಪುರಸಭೆ ಸಿಬ್ಬಂದಿ ವಿಕ್ರಂ ಪ್ರಭು, ಇರ್ವತಯ್ತೂರು ರಾಯಲ್ ಡೆಕೋರೇರ್ಸ್-ಕ್ಯಾಟರರ್ಸ್ನೆಕ್ ನಯಾಝ್, ಚಿತ್ರಾ ಎಲೆಕ್ಟಿçಕಲ್ ಬೆಳುವಾಯಿಯ ರಂಜಿತ್ ಕುಮಾರ್, ಅಲಂಗಾರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಜೆಸಿಂತಾ ಡಿಮೆಲ್ಲೊ ಮುಖ್ಯ ಅತಿಥಿಗಳಾಗಿದ್ದರು. ಅಗರಿ ಸಂಸ್ಥೆಯ ಮಾಲಕ ಅಗರಿ ರಾಘುವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ವಾಯ್ಸ್ ಆಫ್ ಆರಾಧನ ತಂಡದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಗರಿ ವಾದಿರಾಜ್ ರಾವ್, ಮೆನೇಜರ್ ಸುಭಾಸ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.