ಮೂಡುಬಿದಿರೆ: ವಿದ್ಯಾರ್ಥಿಗಳ ಅಡಗಿರುವ ಪ್ರತಿಭೆಗಳನ್ನು ಹೊರತಂದು ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಸಹಪಠ್ಯ ಚಟುವಟಿಕೆಗಳು ಪ್ರಮುಖ ಸಾಧನವಾಗಿವೆ ಎಂಬ ಧ್ಯೇಯದೊಂದಿಗೆ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ವಿವಿಧ ಕ್ಷೇತ್ರಗಳ ತರಬೇತುದಾರರನ್ನು ಶಾಲೆಯ ಮುಖ್ಯಶಿಕ್ಷಕಿ ಬಿಂದು ಮ್ಯಾಕ್ಸಿಂ ಡಿಸೋಜ ಸ್ವಾಗತಿಸಿದರು. ಭರತನಾಟ್ಯ ತರಬೇತುದಾರೆ ಧನ್ಯಾ, ಕರಾಟೆ ತರಬೇತುದಾರ ನಿಖಿಲ್ ಕೆ.ಟಿ., ಚಿತ್ರಕಲೆ ತರಬೇತುದಾರ ಕಾರ್ತಿಕ್, ಹಸ್ತಕಲಾ ತರಬೇತುದಾರೆ ಸುಕನ್ಯಾ ರಾಜೇಶ್, ಸಂಗೀತ ತರಬೇತುದಾರರಾಗಿ ಶ್ರೀಮತಿ ಹಾಗೂ ಪಾಶ್ಚಿಮಾತ್ಯ ನೃತ್ಯ ತರಬೇತುದಾರರಾಗಿ ಅಮೃತ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಶ್ಮಿತಾ ನಿರೂಪಿಸಿದರು.