ಮೂಡುಬಿದಿರೆ: ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ವಿವಿಧ ಕ್ಲಬ್‌ಗಳ ಉದ್ಘಾಟನಾ ಮತ್ತು ಪ್ರಮಾಣವಚನ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಪಾವ್ಲ್ ಕ್ರಾಸ್ತಾ ವಹಿಸಿದ್ದರು. ಮುಖ್ಯಶಿಕ್ಷಕಿ ಜೆಸಿಂತಾ ಸಿಕ್ವೇರಾ ಕ್ಯಾಬಿನೆಟ್‌ನ ಎಲ್ಲಾ ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.

ಪಾವ್ಲ್ ಕ್ರಾಸ್ತಾ ವಿವಿಧ ಕ್ಲಬ್‌ಗಳನ್ನು ಉದ್ಘಾಟಿಸಿ, ಕ್ಯಾಬಿನೆಟ್ ನಾಯಕರು ಜವಾಬ್ದಾರಿಯುತವಾಗಿ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿ ಶುಭ ಹಾರೈಸಿದರು.

ಶಾಲಾ ನಾಯಕಿಯಾಗಿ ಹತ್ತನೇ ತರಗತಿಯ ಜಿಯಾನ್ನ ಫೆರ್ನಾಂಡಿಸ್ ಹಾಗೂ ಉಪನಾಯಕನಾಗಿ ಏಳನೇ ತರಗತಿಯ ಈಥನ್ ನೋಯೆಲ್ ಸೆರಾವೊ ಆಯ್ಕೆಯಾಗಿದ್ದಾರೆ. ಜಿಯಾನ್ನ ಫೆರ್ನಾಂಡಿಸ್ ಸ್ವಾಗತಿಸಿದರು. ವಿರೋಧ ಪಕ್ಷದ ನಾಯಕ ರೆಯಾನ್ ಡಿಸೋಜಾ ವಂದಿಸಿದರು. ರಿಯಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.