ಮೂಡುಬಿದಿರೆ: 2026-27ನೇ ಸಾಲಿನ ಕಂಬಳ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಕ್ಟೋಬರ್‌ನಲ್ಲಿ ಮೈಸೂರು ಕಂಬಳದ ಮೂಲಕ ಋತುವಿಗೆ ಚಾಲನೆ ದೊರೆಯಲಿದೆ. ಬಳಿಕ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಕರಾವಳಿಯ ವಿವಿಧ ಕಂಬಳ ಕಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ನವೆಂಬರ್ 14ರಂದು ಪಣಪಿಲ, ನವೆಂಬರ್ 21ರಂದು ಕೊಡಂಗೆ ಹಾಗೂ ನವೆಂಬರ್ 28ರಂದು ಕಕ್ಕೆಪದವು ಕಂಬಳ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಹೊಕ್ಕಾಡಿ, ಬಳ್ಳಮಂಜ, ಬಾರಾಡಿ, ಮಂಗಳೂರು ಹಾಗೂ ಮೂಲ್ಕಿ ಕಂಬಳಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ.

ಜನವರಿಯಲ್ಲಿ ಮಿಯ್ಯಾರು, ನರಿಂಗಾನ, ಅಡ್ವೆ, ಮೂಡುಬಿದಿರೆ ಹಾಗೂ ಐಕಳ ಕಂಬಳಗಳು ನಡೆಯಲಿದ್ದು, ಫೆಬ್ರವರಿಯಲ್ಲಿ ಪುತ್ತೂರು, ಜಪ್ಪಿನಮೊಗರು, ವಾಮಂಜೂರ್ ಹಾಗೂ ಎರ್ಮಾಳ್ ಕಂಬಳಗಳು ಆಯೋಜನೆಗೊಳ್ಳಲಿವೆ.

ಮಾರ್ಚ್ ತಿಂಗಳಲ್ಲಿ ಬಂಟ್ವಾಳ, ಬಂಗಾಡಿ, ವೇಣೂರು ಹಾಗೂ ಉಪ್ಪಿನಂಗಡಿ ಕಂಬಳಗಳು ನಡೆಯಲಿದ್ದು, ಏಪ್ರಿಲ್‌ನಲ್ಲಿ ಗುರುಪುರ, ಬಳ್ಕುಂಜೆ, ಹರೇಕಳ ಹಾಗೂ ಬಡಗಬೆಟ್ಟು ಕಂಬಳಗಳೊಂದಿಗೆ 2026-27ರ ಕಂಬಳ ಋತು ಪೂರ್ಣಗೊಳ್ಳಲಿದೆ.