ಮೂಡುಬಿದಿರೆ: ಮಿಜಾರು ಚೆಕ್ಪೋಸ್ಟ್ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಭಾನುವಾರ ರಾತ್ರಿ ಘಟನೆ ನಡೆದಿದೆ.
ಮೃತ ಪಾದಚಾರಿ ಸ್ಥಳೀಯ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತರ ಗುರುತು ಹಾಗೂ ಇತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ವಾಹನ ಡಿಕ್ಕಿಯಾಗಿ ಕೇವಲ ಐದು ನಿಮಿಷಗಳ ಅವಧಿಯಲ್ಲಿ ಸ್ಥಳೀಯರು ರಸ್ತೆಯ ಮಧ್ಯೆ ಜಮಾಯಿಸಿ ಆಕ್ರೋಶ ಹೊರಹಾಕಿದರು.