ಕಾರ್ಕಳ: 'ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ (ಸಿಎಂಎ) ಫೌಂಡೇಶನ್' ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಪೈಕಿ 14 ಮಂದಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದು, ಸಂಸ್ಥೆ ಶೇ. 77.77ರಷ್ಟು ತೇರ್ಗಡೆ ಪ್ರಮಾಣ ದಾಖಲಿಸಿದೆ.

ವಿದ್ಯಾರ್ಥಿಗಳಾದ ಸುಜೀತ್ ಯು ನಾಯಕ್ (296), ಆದ್ಯ ಎಸ್ ಪಾಡ್ರೆ (292), ಭೂಮಿಕ ಸುಬ್ಬರಾಯ್ ಹೆಗ್ಡೆ (282), ವರುಣ್ ಚಂದ್ರಶೇಖರ್ ಕಚತ್ತಿ (280), ಅಕ್ಷರ್ ಎಸ್ ನಾಯಕ್ (270), ಅನಿರುದ್ಧ ಕೆ.ಕೆ. (270), ಸೃಷ್ಠಿ (252), ಹಿತ ರವಿ ಶೆಟ್ಟಿ (240), ಅನ್ವಿತ್ ಪ್ರಶಾಂತ್ ಮೂಲೆ (230), ಸಮೃತಿ ಎಂ ಗೌಡ (230), ಚಿನ್ಮಯ್ (226), ಅನ್ನಿಕ (224), ವೃದ್ಧಿ ಎಸ್ ಶೆಟ್ಟಿ (208) ಹಾಗೂ ಅನುಷ್ಕ ಶರಣಗೌಡ ಬಿರದಾರ್ (200) ಅಂಕಗಳನ್ನು ಪಡೆದು ಅರ್ಹತೆ ಗಳಿಸಿದ್ದಾರೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ ಸಿಎಂಎ ಫೌಂಡೇಶನ್ ಪರೀಕ್ಷೆಯ ತೇರ್ಗಡೆ ಪ್ರಮಾಣ ಶೇ. 25ರಷ್ಟಿದ್ದರೆ, ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಶೇ. 77.77ರಷ್ಟು ತೇರ್ಗಡೆ ಸಾಧಿಸಿರುವುದು ವಿಶೇಷವಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಪರೀಕ್ಷಾ ಸಂಯೋಜಕ ಜ್ಞಾನೇಶ್ ಕೋಟ್ಯಾನ್ ಅಭಿನಂದನೆ ಸಲ್ಲಿಸಿದ್ದಾರೆ.