ಮೂಡುಬಿದಿರೆ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ (55) ಅವರ ಮೃತದೇಹ ಹನ್ನೆರಡು ಕವಲು ಪ್ರದೇಶದ ನದಿಯಲ್ಲಿ ಪತ್ತೆಯಾಗಿದೆ.
ಭೋಜ ಪೂಜಾರಿ ಲೂನಾ ವಾಹನದಲ್ಲಿ ಮನೆಯಿಂದ ತೆರಳಿದ್ದ ಬಳಿಕ ಅವರು ಮರಳಿರಲಿಲ್ಲ. ಬಳಿಕ ನಡೆದ ಹುಡುಕಾಟದ ವೇಳೆ ಹನ್ನೆರಡು ಕವಲು ಸಮೀಪದ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಅವಿವಾಹಿತರಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.