ಮೂಡುಬಿದಿರೆ: ಧವಳ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಶಿಕ್ಷಕರ ಸಂಘ (ಮುಕ್ತಾ) ಹಾಗೂ ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್, ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಜುಲೈ 18ರಂದು 'ಧವಳ ಡೆಸ್ಟಿನಿ-26' ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಧವಳ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 9:30ಕ್ಕೆ ಆರಂಭಗೊಳ್ಳುವ ಈ ಮೆಗಾ ಕ್ಯಾಂಪಸ್ ಪ್ಲೇಸ್‌ಮೆಂಟ್ ಡ್ರೈವ್‌ನಲ್ಲಿ ಪದವೀಧರರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.

ಐಟಿ ಮತ್ತು ಸಾಫ್ಟ್‌ವೇರ್, ಮ್ಯಾನುಫ್ಯಾಕ್ಚರಿಂಗ್, ಆಟೋಮೊಬೈಲ್, ಬ್ಯಾಂಕಿಂಗ್ ಮತ್ತು ಫೈನಾನ್ಸ್, ಸೇಲ್ಸ್ ಮತ್ತು ಮಾರ್ಕೆಟಿಂಗ್, ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್, ಹೆಚ್‌ಆರ್ ಮತ್ತು ರೆಕ್ರೂಟ್‌ಮೆಂಟ್, ಕಸ್ಟಮರ್ ಸಪೋರ್ಟ್, ಬಿಪಿಒ, ಹಾಸ್ಪಿಟಾಲಿಟಿ ಹಾಗೂ ಟೆಕ್ನಿಕಲ್ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉದ್ಯೋಗ ಮೇಳದಲ್ಲಿ ಎಜೆ ಗ್ರಾಂಡ್ ಎಲೈಟ್ ಹೋಟೆಲ್, ವಿನ್‌ಮ್ಯಾನ್, ಮ್ಯಾಂಗೇಟ್ಸ್, ಗ್ರೋಸ್ಪೈರ್, ಇನ್ವೆಂಜರ್, ಆಟೋಮೇಷನ್ ಟೆಕ್ನಾಲಜೀಸ್, ವಿ4 ನ್ಯೂಸ್ 24x7, ಲೆಕ್ಸಾ ಲೈಟಿಂಗ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್, ಮುತ್ತೂಟ್ ಫೈನಾನ್ಸ್, ಅನೋನ್, ಅಕೋಲೇಡ್ ಟೆಕ್ ಸೊಲ್ಯೂಷನ್ಸ್, ಕೋಜೆಂಟ್, ಭರತ್ ಆಟೋ ಸೇಫ್ಟಿ ಲಿಮಿಟೆಡ್, ಯುನಿಫೈ ಸಿಎಕ್ಸ್, ಯುನೈಟೆಡ್ ಟೊಯೋಟಾ, ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಎ1 ಲಾಜಿಕ್ಸ್ ಹಾಗೂ ಜೆಡಿ ಇನ್ಫೋಲ್ಯಾಬ್ಸ್ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ನಡೆಸಲಿವೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ಆನ್‌ಲೈನ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9902339311 ಅಥವಾ 9901359311 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.