ಮೂಡುಬಿದಿರೆ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್ 2026 ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿದ 21 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ, ಸೂರ್ಯಕಾಂತ್ ಪಾಟೀಲ್ ರಾಷ್ಟ್ರಮಟ್ಟದ ಕ್ಯಾಟಗರಿ ವಿಭಾಗದಲ್ಲಿ 97ನೇ ರ‍್ಯಾಂಕ್, ಚೇತನ್ ಯರನಾಳ್ 239ನೇ ರ‍್ಯಾಂಕ್, ಕ್ಲಾರೆನ್ಸ್ ಡಿ’ಸೋಜ 724ನೇ ರ‍್ಯಾಂಕ್ ಹಾಗೂ ದೀಕ್ಷಿತಾ ಕೆ.ಎಸ್. 951ನೇ ರ‍್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ವೈದ್ಯಕೀಯ ರ‍್ಯಾಂಕಿಂಗ್‌ನಲ್ಲಿ ಕ್ಯಾಟಗರಿ ವಿಭಾಗದ ಟಾಪ್–500ರಲ್ಲಿ ಮೂರು ವಿದ್ಯಾರ್ಥಿಗಳು, ಟಾಪ್–1000ರಲ್ಲಿ 14 ವಿದ್ಯಾರ್ಥಿಗಳು, ಟಾಪ್–2000ರಲ್ಲಿ 26 ವಿದ್ಯಾರ್ಥಿಗಳು ಹಾಗೂ ಟಾಪ್–5000ರಲ್ಲಿ 72 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಸೂರ್ಯಕಾಂತ್ ಪಾಟೀಲ್ 653, ಕ್ಲಾರೆನ್ಸ್ ಡಿ’ಸೋಜಾ 612, ವೈಭವಿ ಎಂ. 611, ಆಯುಶ್ ಕಲ್ಗುಡಿ 611, ಪರಿಣಿತ್ ಗೌಡ ಬಿ.ಎಲ್. 605, ಲೋಕೆಶ್ ಬಿ.ಎನ್. 605, ದೀಕ್ಷಿತ ಕೆ.ಎಸ್. 604, ಬಶೀರ್ ಅಹಮ್ಮದ್ 601, ಸುಹರ್ಷ ಎಚ್.ಎಚ್. 600 ಹಾಗೂ ಮಲ್ಲಿಕಾರ್ಜುನ ಎಸ್.ಎಚ್. 600 ಅಂಕಗಳನ್ನು ಗಳಿಸಿದ್ದಾರೆ.
ಆಳ್ವಾಸ್‌ನ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 161 ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಹಾಗೂ ಒಟ್ಟು 467 ವಿದ್ಯಾರ್ಥಿಗಳು 450ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ ಎಂದರು.
99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಸೂರ್ಯಕಾಂತ್ ಪಾಟೀಲ್, ಕ್ಲಾರೆನ್ಸ್ ಡಿ’ಸೋಜಾ, ವೈಭವಿ ಎಂ., ಆಯುಶ್ ಕಲ್ಗುಡಿ, ಪರಿಣಿತ್ ಗೌಡ ಬಿ.ಎಲ್., ಲೋಕೆಶ್ ಬಿ.ಎನ್., ದೀಕ್ಷಿತ ಕೆ.ಎಸ್., ಸುಹರ್ಷ ಎಚ್.ಎಚ್., ಮಲ್ಲಿಕಾರ್ಜುನ ಎಸ್.ಎಚ್., ಕೀರ್ತನ ವೈ.ಸಿ., ರಾಹುಲ್ ಜಂಬಗಿ, ಸಿದ್ಧರೂಢ ಶ್ರೀಶೈಲ, ತ್ವಿಶಾ ಎಸ್. ಭಂಡಾರಿ, ಕುಶಲ್ ಗೌಡ ಎಂ.ಎಸ್., ಮಹಮ್ಮದ್ ಅಶೀಮ್, ಸೃಜನ್ ವಿ., ಗೋಕುಲ್ ಎಸ್., ಸಂಕೇತ್ ಎ.ಜಿ., ಯಶಸ್ವಿನಿ ವೈ.ಇ. ಹಾಗೂ ಬಶೀರ್ ಅಹಮ್ಮದ್, ದರ್ಶನ್ ಕಲ್ಲಯ್ಯ ಪೂಜಾರ್ ಸೇರಿದ್ದಾರೆ.
ಜನರಲ್ ಕ್ಯಾಟಗರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹೈದರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ, ವಿಶಿಷ್ಟಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ ಕೋಟಾಗಳಲ್ಲಿ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ನಿರೀಕ್ಷೆ ಇದೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ. ಸದಾಕತ್ ಹಾಗೂ ಪ್ರದೀಪ ಕುಮಾರ್ ಎಂ. ಉಪಸ್ಥಿತರಿದ್ದರು.