ಮೂಡುಬಿದಿರೆ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್–2026) ಫಲಿತಾಂಶದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದು, ಮತ್ತೊಮ್ಮೆ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ನಿಖಿಲ್ ಎಸ್.ಎಸ್. 720ಕ್ಕೆ 650 ಅಂಕಗಳನ್ನು ಪಡೆದು ಅಗ್ರಸ್ಥಾನ ಗಳಿಸಿದ್ದಾರೆ. ತನ್ಮಯಿ ಎ. ಕೋಟಿ 647 ಅಂಕ, ಚಿನ್ಮಯಿ ಬೆಳ್ಳೂರು 629 ಅಂಕ, ಹೇಮಾ ಯು. 624 ಅಂಕ, ಶ್ಲೋಕ್ ರಾಘವೇಂದ್ರ ರಾವ್ 615 ಅಂಕ, ಈಶ್ವರ ಪುಂಡಲೀಕಪ್ಪ ಕೊಪ್ಪಲ್ 612 ಅಂಕ ಹಾಗೂ ಮೋಹಿತ್ ವೈ.ಪಿ. 611 ಅಂಕಗಳನ್ನು ಪಡೆದು ಕಾಲೇಜಿನ ಸಾಧನೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ 600ಕ್ಕೂ ಅಧಿಕ ಅಂಕಗಳನ್ನು 7 ವಿದ್ಯಾರ್ಥಿಗಳು, 550ಕ್ಕೂ ಅಧಿಕ ಅಂಕಗಳನ್ನು 32 ವಿದ್ಯಾರ್ಥಿಗಳು, 500ಕ್ಕೂ ಅಧಿಕ ಅಂಕಗಳನ್ನು 70 ವಿದ್ಯಾರ್ಥಿಗಳು ಹಾಗೂ 450ಕ್ಕೂ ಅಧಿಕ ಅಂಕಗಳನ್ನು 124 ವಿದ್ಯಾರ್ಥಿಗಳು ಗಳಿಸಿದ್ದಾರೆ. ಒಟ್ಟಾರೆ 216 ವಿದ್ಯಾರ್ಥಿಗಳು 400 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಉತ್ತಮ ಅವಕಾಶ ಸೃಷ್ಟಿಸಿಕೊಂಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಎಐಐಎಂಎಸ್ (AIIMS), ಎಎಫ್‌ಎಂಸಿ (AFMC), ಜಿಪ್ಮರ್ (JIPMER) ಸೇರಿದಂತೆ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ. ಈ ಬಾರಿಯ ನೀಟ್ ಫಲಿತಾಂಶದಲ್ಲೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದು, ದೇಶದ ಪ್ರಮುಖ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿಶ್ವಾಸ ಮೂಡಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅವರ ಪರಿಶ್ರಮ, ಪೋಷಕರ ಪ್ರೋತ್ಸಾಹ, ಅನುಭವಿ ಉಪನ್ಯಾಸಕರ ಮಾರ್ಗದರ್ಶನ ಹಾಗೂ ಎಕ್ಸಲೆಂಟ್ ಪಿಯು ಕಾಲೇಜಿನ ವ್ಯವಸ್ಥಿತ ತರಬೇತಿ ಮತ್ತು ಶಿಸ್ತುಬದ್ಧ ಶೈಕ್ಷಣಿಕ ವಾತಾವರಣವೇ ಪ್ರಮುಖ ಕಾರಣವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.
ವಿದ್ಯಾರ್ಥಿಗಳನ್ನು ಯುವರಾಜ್ ಜೈನ್, ರಶ್ಮಿತಾ ಜೈನ್, ಪ್ರಶಾಂತ್ ಹೆಗ್ಡೆ, ರಾಮಮೂರ್ತಿ, ಪುಷ್ಪರಾಜ್, ಸಂಪತ್ ಕುಮಾರ್ ಡಿ.ಪಿ., ದಯಾನಂದ್, ಸುನಾದ್ ರಾಜ್, ತೇಜಸ್ವಿ ಭಟ್, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.