ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಡಿ. 99.977 ಪರ್ಸಂಟೈಲ್‌ನೊಂದಿಗೆ 672 ಅಂಕಗಳನ್ನು ಪಡೆದು ಮೂಡುಬಿದಿರೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 456ನೇ ರ‍್ಯಾಂಕ್ ಹಾಗೂ ಸಾಮಾನ್ಯ ವರ್ಗದಲ್ಲಿ 283ನೇ ರ‍್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಶಮಂತ್ ಪಿ. ಗೌಡ 99.835 ಪರ್ಸಂಟೈಲ್‌ನೊಂದಿಗೆ 632 ಅಂಕ, ಪ್ರೀತಮ್ ಹೆಚ್.ಎಂ. 99.690 ಪರ್ಸಂಟೈಲ್‌ನೊಂದಿಗೆ 615 ಅಂಕ, ಬಿ. ವಿನಯ್ 99.525 ಪರ್ಸಂಟೈಲ್‌ನೊಂದಿಗೆ 602 ಅಂಕ, ಮನ್ವಿತ್ ಎಸ್. ಪದ್ಮಶಾಲಿ 99.267 ಪರ್ಸಂಟೈಲ್‌ನೊಂದಿಗೆ 588 ಅಂಕ, ಶೋಭಿತಾ ಕೆ.ಸಿ. 99.182 ಪರ್ಸಂಟೈಲ್‌ನೊಂದಿಗೆ 584 ಅಂಕ, ಹರ್ಷಿತ ಸಿ. 98.597 ಪರ್ಸಂಟೈಲ್‌ನೊಂದಿಗೆ 563 ಅಂಕ, ಕಿಶನ್ ಶಿವಮೂರ್ತಯ್ಯ ಮಟದ್ 98.526 ಪರ್ಸಂಟೈಲ್‌ನೊಂದಿಗೆ 561 ಅಂಕ, ಮಿಥುನ್ ಕೆ.ಪಿ. 98.487 ಪರ್ಸಂಟೈಲ್‌ನೊಂದಿಗೆ 560 ಅಂಕ, ಶ್ರೇಯಸ್ ಯು. ಶಾನಭಾಗ್ 98.452 ಪರ್ಸಂಟೈಲ್‌ನೊಂದಿಗೆ 559 ಅಂಕ, ಅಂಕಿತಾ ಸರವಗೊಲ್ 98.194 ಪರ್ಸಂಟೈಲ್‌ನೊಂದಿಗೆ 552 ಅಂಕ, ಪವನ್ ಕುಮಾರ್ 98.156 ಪರ್ಸಂಟೈಲ್‌ನೊಂದಿಗೆ 551 ಅಂಕ, ಆದಿತ್ಯ ಸಿ. ಪಾಟೀಲ್ 98.114 ಪರ್ಸಂಟೈಲ್‌ನೊಂದಿಗೆ 550 ಅಂಕ, ಪ್ರವೀಣ್ ಹನುಮಂತ್ 97.992 ಪರ್ಸಂಟೈಲ್‌ನೊಂದಿಗೆ 547 ಅಂಕ, ಭರದ್ವಾಜ್ ಪಿ.ಯು. 97.682 ಪರ್ಸಂಟೈಲ್‌ನೊಂದಿಗೆ 540 ಅಂಕ, ಶ್ರೀಗೌರಿ 97.687 ಪರ್ಸಂಟೈಲ್‌ನೊಂದಿಗೆ 540 ಅಂಕ, ದಿಗಂತ್ ಬಿ.ಎಚ್. 97.596 ಪರ್ಸಂಟೈಲ್‌ನೊಂದಿಗೆ 538 ಅಂಕ, ತೇಜಸ್ ಡಿ.ಎಂ. 97.500 ಪರ್ಸಂಟೈಲ್‌ನೊಂದಿಗೆ 536 ಅಂಕ, ಪುನೀತ್ ಹೆಚ್.ಡಿ. 97.500 ಪರ್ಸಂಟೈಲ್‌ನೊಂದಿಗೆ 536 ಅಂಕ, ಸರಸ್ವತಿ ಎಂ.ಎಸ್. 97.403 ಪರ್ಸಂಟೈಲ್‌ನೊಂದಿಗೆ 534 ಅಂಕ ಹಾಗೂ ಶಶಾಂಕ್ 484 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 13 ವಿದ್ಯಾರ್ಥಿಗಳು 550ಕ್ಕೂ ಅಧಿಕ ಅಂಕಗಳನ್ನು ಹಾಗೂ 37 ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಪಡೆದು ಕಾಲೇಜಿನ ಸಾಧನೆಗೆ ಮೆರುಗು ತಂದಿದ್ದಾರೆ. ಕಾಲೇಜಿನಲ್ಲಿ ನೀಡಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಗುಣಮಟ್ಟದ ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.

ಈ ವರ್ಷ ಕಾಲೇಜಿನಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರೆಯುವ ನಿರೀಕ್ಷೆ ಇದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದಿಸಿದ್ದಾರೆ.