ಮೂಡುಬಿದಿರೆ: 2025–26ನೇ ಶೈಕ್ಷಣಿಕ ವರ್ಷದ ಬಿಕಾಂ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಹೊಸಬೆಟ್ಟುವಿನ ಶ್ರವಣ್ 650 ಅಂಕಗಳಿಗೆ 629 ಅಂಕ (ಶೇ. 96.77) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಶ್ರವಣ್ ಅವರ ಈ ಸಾಧನೆ ಕಾಲೇಜಿಗೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದೆ. ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶ್ರವಣ್, ದಿ. ಶಂಕರ್ ಮಡಿವಾಳ ಮತ್ತು ಸುಜಾಯ ಅವರ ಪುತ್ರನಾಗಿದ್ದಾರೆ.