ಜೈನಕಾಶಿ ಮೂಡುಬಿದಿರೆಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಸಪ್ತಮಿ ಅಂಗವಾಗಿ ಬುಧವಾರ ಶ್ರೀ ಮಠ ಹಾಗೂ ಗುರು ಬಸದಿಯಲ್ಲಿ ವಿಶೇಷ ಪೂಜೆ ನೆರವೇರಿತು. ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗುರು ಬಸದಿ ಹಾಗೂ ಕ್ಷೇತ್ರದ ಮೂಲಸ್ವಾಮಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಬೆಳಗ್ಗೆ ನಡೆದ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಅಷ್ಟವಿಧಾರ್ಚನೆ ಪೂಜೆ ಸಲ್ಲಿಸಿದರು. ಬಳಿಕ 2803ನೇ ಮೋಕ್ಷ ಕಲ್ಯಾಣ ಮಹಾ ಅರ್ಘ್ಯ ಸಮರ್ಪಿಸಿದರು. ಶಂಭವ ಕುಮಾರ್ ವೀರೇಂದ್ರ, ಸನತ್ ಕುಮಾರ್, ವೀಣಾ ರಘುಚಂದ್ರ, ಮಂಜುಳಾ ಅಭಯಚಂದ್ರ, ದಿವ್ಯಾ, ಆರತಿ ಪುರೋಹಿತ, ವಿರಾಜ್ ಇಂದ್ರ ಹಾಗೂ ಮಧ್ಯಪ್ರದೇಶದ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.
ಎಂಬಿಡಿ_ಆಗಸ್ಟ್19_12_ಪಾರ್ಶ್ವನಾಥ ಮೋಕ್ಷ ಸಪ್ತಮಿ ಪಾರ್ಶ್ವನಾಥ ಮೋಕ್ಷ ಸಪ್ತಮಿ ಅಂಗವಾಗಿ ಪೂಜೆ ನೆರವೇರಿಸಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ವಿರಾಜ್ ಇಂದ್ರ, ಶಂಭವ ಕುಮಾರ್ ವೀರೇಂದ್ರ ಮತ್ತಿತರರಿದ್ದರು.