ಮೂಡುಬಿದಿರೆ: ಕಾಂತಾವರ ಮೈಂತೂರು ಶ್ಯಾಮರಾಯ ಆಚಾರ್ಯ ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 17ರಂದು ನಿಧನರಾದರು.

ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ ವಿಶ್ವಕರ್ಮ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ಯಾಮರಾಯ ಆಚಾರ್ಯ, ಕಾಂತಾವರ ಗ್ರಾಮದ ಕೇಪ್ಲಾಜೆ, ಮೂಡುಬಿದಿರೆಯ ಕೊಡಂಗಲ್ಲು ಹಾಗೂ ಕೋಟೆಬಾಗಿಲು ಇಲ್ಲಿನ ಮಾರಿಗುಡಿಗಳ ಉತ್ಸವದ ದಾರುಬಿಂಬ ರಚನೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಹಲವು ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳಲ್ಲಿ ಗೌರವ ಸನ್ಮಾನಗಳನ್ನು ಸ್ವೀಕರಿಸಿದ್ದರು. ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.