ಮೂಡುಬಿದಿರೆ: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ) ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರ ಸಮಿತಿ ವತಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಪಿಯುಸಿಯಿಂದ 35 ವರ್ಷದವರೆಗಿನ ಕ್ಯಾಥೋಲಿಕ್ ಯುವಜನರು ಹಾಗೂ ವಿದ್ಯಾರ್ಥಿಗಳಿಗಾಗಿ ‘ಸ್ಕಿಲ್ ಫಿಯೆಸ್ಟಾ 2026’ ಎಂಬ ಒಂದು ದಿನದ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್ ಆಯೋಜಿಸಲಾಗಿದೆ.

ಐಸಿವೈಎಂ ಸದಸ್ಯರು ಮಾತ್ರವಲ್ಲದೆ, ಐಸಿವೈಎಂಗೆ ಸೇರದವರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

‘ಸ್ಕಿಲ್ಸ್ ಟುಡೇ, ಲೀಡರ್ಸ್ ಟುಮಾರೊ, ಇಂಪ್ಯಾಕ್ಟ್ ಫಾರೆವರ್’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮವು ಆಗಸ್ಟ್ 23ರಂದು ಭಾನುವಾರ ಬೆಳಿಗ್ಗೆ 8.30ಕ್ಕೆ ಮಂಗಳೂರಿನ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ನಡೆಯಲಿದೆ.

ಯುವಜನರಲ್ಲಿ 21ನೇ ಶತಮಾನದ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉದ್ಯಮ ಕ್ಷೇತ್ರದ ತಜ್ಞರು ತರಬೇತಿ ನೀಡಲಿದ್ದಾರೆ. ಎಐ ಮತ್ತು ಆವಿಷ್ಕಾರ, ಕಂಟೆಂಟ್ ಕ್ರಿಯೇಷನ್, ಸ್ಟಾರ್ಟ್‌ಅಪ್ ಮನೋಭಾವ, ನಾಗರಿಕ ಸೇವೆಗಳು, ಕಾರ್ಯಕ್ರಮ ನಿರ್ವಹಣೆ, ಸಾರ್ವಜನಿಕ ಭಾಷಣ ಹಾಗೂ ಸಾಫ್ಟ್ ಸ್ಕಿಲ್ಸ್ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು. ಇದು ಅವರ ರೆಸ್ಯೂಮ್ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಹೆಚ್ಚುವರಿ ಮೌಲ್ಯ ನೀಡಲಿದೆ.

ಮುಂಗಡ ನೋಂದಣಿ ಕಡ್ಡಾಯವಾಗಿದ್ದು, ಆಸಕ್ತರು +91 9448917044 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ತಮ್ಮ ವ್ಯಾಪ್ತಿಯ ಪ್ಯಾರಿಷ್ ಐಸಿವೈಎಂ ಘಟಕದ ಮೂಲಕ ನೋಂದಾಯಿಸಿಕೊಳ್ಳಬಹುದು. ಸೀಮಿತ ಸಂಖ್ಯೆಯ ಆಸನಗಳಿದ್ದು, ಆಸನಗಳು ಭರ್ತಿಯಾದ ಬಳಿಕ ನೋಂದಣಿ ಮುಕ್ತಾಯಗೊಳ್ಳಲಿದೆ.