ಮೂಡುಬಿದಿರೆ: ಪಾಡ್ಯಾರ್ ಫ್ರೆಂಡ್ಸ್ ಆಶ್ರಯದಲ್ಲಿ 2ನೇ ವರ್ಷದ ‘ಕೆಸರ್ದ ಗೊಬ್ಬು’ (ಕೆಸರುಗದ್ದೆ ಕ್ರೀಡಾಕೂಟ) ಕಾರ್ಯಕ್ರಮವು 2026ರ ಆಗಸ್ಟ್ 23ರಂದು ಬನ್ನಡ್ಕ ಸಮೀಪದ ಬಾಕ್ಯಾರ್ ಪಾಡ್ಯಾರ್‌ನಲ್ಲಿ ಆಯೋಜಿಸಲಾಗಿದೆ.

ಬನ್ನಡ್ಕ ಪರಿಸರದ ಸಾರ್ವಜನಿಕರು ಹಾಗೂ ಬಾಂಧವರಿಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೂ ಪ್ರತ್ಯೇಕವಾಗಿ ವಿವಿಧ ಗ್ರಾಮೀಣ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.