ಮೂಡುಬಿದಿರೆ:ತಾಲೂಕಿನ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಸಿಡಿಲು ಬಡಿತಕ್ಕೆ ಮೂರು ದನಗಳು ಮೃತಪಟ್ಟಿವೆ. ಆನಂದ ಮೇರ ಎಂಬವರಿಗೆ ಸೇರಿದ ಹಸುಗಳು ಕೊಟ್ಟಿಗೆಯಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ. ಸೋಮವಾರ ಸಂಜೆ ವೇಳೆ ಮೂಡುಬಿದಿರೆ ತಾಲೂಕಿನಾದ್ಯಂತ ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಯೂ ಸುರಿದಿದೆ. ಆನಂದ ಮೇರ ಈ ಮೂರು ದನಗಳಿಂದ ಹಾಲು ಸಂಗ್ರಹಿಸಿ ಡೈರಿಗೆ ನೀಡುತ್ತಿದ್ದರು. ಸಿಡಿಲು ಬಡಿದ ತೀವ್ರತೆಗೆ ಕೊಟ್ಟಿಗೆಯಲ್ಲಿದ್ದ ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
2025ರ ಅಪಘಾತದಲ್ಲಿ ಗಾಯಗೊಂಡಿದ್ದ ಮೂಡುಬಿದಿರೆ ಸಂಪಿಗೆಯ ಮಹಿಳೆ ಸಾವು
ಮೂಡುಬಿದಿರೆ: ಅಬಕಾರಿ ನಿರೀಕ್ಷಕ, ಪುತ್ತಿಗೆ ಗ್ರಾಮದ ಸಂಪಿಗೆ ನಿವಾಸಿ ರಾಜೇಶ್ ನಾಯ್ಕ್ ಅವರ ಪತ್ನಿ ಜಯಲಕ್ಷಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಬನ್ನಡ್ಕದಲ್ಲಿ ದನಗಳಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಒಂದು ದನ ಸಾವು, ಎರಡು ಗಂಭೀರ
ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಬನ್ನಡ್ಕ ದೈವಸ್ಥಾನದ ಬಳಿ ದನಗಳಿಗೆ ಡಿಕ್ಕಿಯಾಗಿದ್ದು, ಒಂದು ದನ ಮೃತಪಟ್ಟಿದೆ. ಎರಡು ದನಗಳು ಗಂಭೀರವಾಗಿ ಗಾಯಗೊಂಡಿವೆ.
ಮೂಡುಬಿದಿರೆ ತಾಲೂಕು ಆಡಳಿತ ಸೌಧಕ್ಕೆ ಲೋಕಾಯುಕ್ತ ದಿಢೀರ್ ದಾಳಿ: ಕಡತ ಪರಿಶೀಲನೆ
ಮೂಡುಬಿದಿರೆ: ಮೂಡುಬಿದಿರೆಯ ತಾಲೂಕು ಆಡಳಿತ ಸೌಧಕ್ಕೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.