ಮೂಡುಬಿದಿರೆಯಲ್ಲಿ ಜೂನ್ 28ರಂದು ‘ರೋಷ್ನಿ’ ಇನ್ನರ್ ವೀಲ್ ಜಿಲ್ಲಾ ಅಸೆಂಬ್ಲಿ: ರಜನಿ ಭಟ್ ಪದಗ್ರಹಣ-650ಕ್ಕೂ ಅಧಿಕ ಪ್ರತಿನಿಧಿಗಳ ನಿರೀಕ್ಷೆ
ಮೂಡುಬಿದಿರೆ: ಇನ್ನರ್ ವೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಷ್ನಿ’ ಕಾರ್ಯಕ್ರಮ ಜೂನ್ 28ರಂದು ಕನ್ನಡ ಭವನದಲ್ಲಿ ನಡೆಯಲಿದ್ದು, 2026-27ನೇ ಸಾಲಿನ ಜಿಲ್ಲಾ ಚೇರ್ಮನ್ ಆಗಿ ರಜನಿ ಭಟ್ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಜರುಗಲಿದೆ ಎಂದು ಅಧಿವೇಶನದ ಕಾರ್ಯದರ್ಶಿ, ಜಿಲ್ಲಾ ಪೂರ್ವ ಚೇರ್ಮನ್ ಶಾಲಿನಿ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.