ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುವ ಸಂದರ್ಭದಲ್ಲಿ ಪುತ್ತಿಗೆ ಪದವಿನಲ್ಲಿ ಚರಂಡಿಗೆ ಬಿದ್ದು ಬುಧವಾರ ಮೃತಪಟ್ಟಿದ್ದಾರೆ. ಮಂಗಳೂರು ಕೊಣಾಜೆ ಮೂಲದ ಮಾಧವ (45) ಮೃತಪಟ್ಟ ವ್ಯಕ್ತಿ. ಇವರು ಕೆಲವು ದಿನಗಳ ಹಿಂದೆ ಮೂಡುಬಿದಿರೆ ಪುತ್ತಿಗೆ ಜಾತ್ರೆಗೆಂದು ಪುತ್ತಿಗೆ ಮಜ್ಜಿಗುರಿಯಲ್ಲಿರುವ ಅಕ್ಕನ ಮನೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ ಅಕ್ಕನ ಮನೆಯಿಂದ ಮರಳಿ ಹೋಗುತ್ತಿದ್ದಾಗ ಪುತ್ತಿಗೆ ಪದವಿನಲ್ಲಿ ಹೃದಯಾಘಾತ ಸಂಭವಿಸಿ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಪುತ್ತಿಗೆ ಜಾತ್ರೆಗೆ ಬಂದಿದ್ದ ವ್ಯಕ್ತಿ ಚರಂಡಿಗೆ ಕುಸಿದು ಬಿದ್ದು ಸಾವು: ಪುತ್ತಿಗೆ ಪದವಿನಲ್ಲಿ ಘಟನೆ
ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುವ ಸಂದರ್ಭದಲ್ಲಿ ಪುತ್ತಿಗೆ ಪದವಿನಲ್ಲಿ ಚರಂಡಿಗೆ ಬಿದ್ದು ಬುಧವಾರ ಮೃತಪಟ್ಟಿದ್ದಾರೆ.