ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ರಾಜ್ಯದ ಅಗ್ರ ಹತ್ತು ರ‍್ಯಾಂಕ್‌ಗಳ ಪಟ್ಟಿಯಲ್ಲಿ ಕಾಲೇಜಿನ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಮೊದಲು ಪ್ರಕಟಗೊಂಡ ಫಲಿತಾಂಶದಲ್ಲಿ ಧನುಷ್ ಗುತ್ತಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದರು.
ಮರುಮೌಲ್ಯಮಾಪನದಲ್ಲಿ ಸರಸ್ವತಿ ಎಂ.ಸಿ. ಎರಡು ಅಂಕಗಳನ್ನು ಹೆಚ್ಚಿಸಿಕೊಂಡು ಒಟ್ಟು 595 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದಾರೆ. ರವಿಜೇಜ್ ಎಸ್. ಐದು ಅಂಕಗಳನ್ನು ಅಧಿಕವಾಗಿ ಪಡೆದು ಒಟ್ಟು 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರ‍್ಯಾಂಕ್ ಸಾಧಿಸಿದ್ದಾರೆ. ತಸ್ನೀಮ್ ಎಸ್. ಎಂ. 592 ಅಂಕಗಳೊಂದಿಗೆ ಈಗಾಗಲೇ ರಾಜ್ಯಕ್ಕೆ 8ನೇ ರ‍್ಯಾಂಕ್ ಗಳಿಸಿದ್ದರೆ, ಕಿಶನ್ ಎಸ್. ಮಾತಾಡ್ ಒಂದು ಅಂಕ ಹೆಚ್ಚಿಸಿಕೊಂಡು ಒಟ್ಟು 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ ಕಾಲೇಜಿನ ಒಟ್ಟು ರ‍್ಯಾಂಕ್‌ಗಳ ಸಂಖ್ಯೆ 3ರಿಂದ 5ಕ್ಕೆ ಏರಿಕೆಯಾಗಿದೆ.
ಧನುಷ್ ಗುತ್ತಿ ಮತ್ತು ಸರಸ್ವತಿ ಎಂ.ಸಿ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಕ್ರಮವಾಗಿ ಗಣಕಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಇವರೊಂದಿಗೆ ಯಶಸ್ ಎಸ್ (589), ಶ್ರೇಯಸ್ ಯು. ಶಾನಭಾಗ್ (588), ಅನ್ವಿತಾ ಕಾಮತ್ (588), ಅನುಷಾ ಒ. ಸಿ. (588), ಮನ್ವಿತ್ ಎಸ್. ಪದ್ಮಶಾಲಿ (588), ಪ್ರಕೃತಿ ಎಸ್ (588), ವಿವೇಚನ್ ಡಿ. ಎಂ. (587), ಕಾವ್ಯ ಎನ್. ಆರ್. (586), ಶಿವಪ್ರಸಾದ್ ರಟ್ಟಿ (586), ದಿಲೀಪ್ ಆರ್. ಎಂ. (586), ಇಂಚರ ಆರ್. (585), ನಿರೀಕ್ಷಾ ಎಲ್ (585), ಹರ್ಷಿಣಿ ಕೆ. ಆರ್. (585) ಹಾಗೂ ಶ್ರೀನವನಿತ ವಿ. ಆರ್. (585) ಅಂಕಗಳನ್ನು ಪಡೆದಿದ್ದಾರೆ. ಕಾಲೇಜಿನ ಒಟ್ಟು 397 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 209 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.