ಮೂಡುಬಿದಿರೆ: ಮಾರೂರು-ಹೊಸಂಗಡಿ ಶ್ರೀಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬುಧವಾರ ಶ್ರೀ ಗೋಪಾಲಕೃಷ್ಣ, ಪರಿವಾರ ದೇವರ ಅಷ್ಟಬಂಧ ಪುನಃ ಪ್ರತಿಷ್ಠಾಪನೆ ನಡೆಯಿತು. ಶಿಖರ ಪ್ರತಿಷ್ಠೆಯ ಬಳಿಕ ಶ್ರೀಗೋಪಾಲಕೃಷ್ಣ ದೇವರ, ಗಣಪತಿ, ಹನುಮಂತ ದೇವರ ಮತ್ತು ಕೊಡಮಣಿತ್ತಾಯ ಧರ್ಮದೈವದ ಅಷ್ಟಬಂಧ ಪುರ್ನಪ್ರತಿಷ್ಠಾಪನೆ ನಡೆಯಿತು. ಎಡಪದವು ಮುರಳೀಧರ ತಂತ್ರಿ, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಕ್ಷೇತ್ರದ ಪ್ರಧಾನ ಅರ್ಚಕ ವೆಂಕಟರಾಜ ಆಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ಆಡಳಿತ ಮೊತ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾರ್ ಶೆಟ್ಟಿ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಉದ್ಯಮಿ ರಾಘು ಸಿ. ಪೂಜಾರಿ, ಶ್ರೀಪತಿ ಉಪಾಧ್ಯಾಯ ಬಡೆಕೋಡಿ, ಸುಧಾಕರ ಶೆಟ್ಟಿ ಮಿತ್ತೊಟ್ಟುಗುತ್ತು, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಜತೆ ಕಾರ್ಯದರ್ಶಿ ಸುಶಾಂತ್ ಕರ್ಕೇರಾ, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ, ಆರ್ಥಿಕ ಸಮಿತಿಯ ಅಶೋಕ್ ಬಿ., ದೇವರಾಜ್ ಸುವರ್ಣ ಪೊಸಲಾಯಿ, ಧರಣೇಂದ್ರ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.