ಮೂಡುಬಿದಿರೆ: ದೇವಾಲಯಗಳ ಜೀರ್ಣೋದ್ಧಾರವು ಊರಿನ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮಾರೂರು ಹೊಸಂಗಡಿ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವನ್ನು ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದ್ದು, ಶುಕ್ರವಾರ ನಡೆದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟೀಲು ಕ್ಷೇತ್ರದ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಭು ಎನ್ ಶೆಟ್ಟಿ ಮಾರೂರು ಗುತ್ತು ಅಧ್ಯಕ್ಷತೆ ವಹಿಸಿದ್ದರು. ಅನಂತಪದ್ಮನಾಭ ಅಸ್ರಣ್ಣ, ರಾಮದಾಸ ಅಸ್ರಣ್ಣ, ರಾಘವೇಂದ್ರ ಅಸ್ರಣ್ಣ ನಾಳ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್, ಶ್ರೀಕ್ಷೇತ್ರ ಹೊಯ್ಪಾಲಬೆಟ್ಟು ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ಕಾರ್ಣೆ, ಸುರೇಶ್ ಶೆಟ್ಟಿ ಮುಂಬೈ, ಅಶೋಕ್ ಬಿಬಿ ಹಾಸನ, ಗಣೇಶ್ ಶೆಟ್ಟಿ, ಶರತ್ ಸುವರ್ಣ ತೋಡಾರು, ಕೊಡಮಣಿತ್ತಾಯ ದೈವಸ್ಥಾನದ ಧರ್ಮದರ್ಶಿ ವಿಶಾಲ ಕೀರ್ತಿ ಬಲಿಪ, ಕರಿಯಂಜೆ ಗುತ್ತು ಕೃಷ್ಣರಾಜ ಹೆಗ್ಡೆ, ಲಾಡಿ ಗುತ್ತು ವೃಷಭರಾಜ ಬಲ್ಲಾಳ್, ಕರ್ಪೆಗುತ್ತು ಶ್ರೀಕಾಂತ್ ಜೈನ್, ದಿಲೀಪ್ ಕುಲಾಲ್ ಶೆಟ್ಟಿ ಮರಿಯಾಡಿ, ಕೆಎಂಎಫ್ ನಿರ್ದೇಶಕ ಕೆಪಿ ಸುಚರಿತ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ ಶ್ರೀಧರ್ ಭಾಗವಹಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಭು ಎನ್ ಶೆಟ್ಟಿ ಮಾರೂರು ಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜೀವಂಧರ್ ಕುಮಾರ್, ಹೊಸಂಗಡಿ ಅರಮನೆ ಆಡಳಿತ ಮೊಕ್ತೇಸರ ಸಂಪತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶಂಕರ್ ಕೋಟ್ಯಾನ್, ರಾಮದಾಸ ಅಸ್ರಣ್ಣ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜೀವಂಧರ್ ಕುಮಾರ್ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ಶ್ರೀಪತಿ ಭಟ್ ಅತಿಥಿಗಳನ್ನು ಗೌರವಿಸಿದರು. ಅರಮನೆ ಆಡಳಿತ ಮೊಕ್ತೇಸರ ಸಂಪತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.