ಮೂಡುಬಿದಿರೆ: ಅಲಂಗಾರು ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಸಂಪೂರ್ಣ ಜೀರ್ಣೋದ್ಧಾರ ಅಂಗವಾಗಿ ಸೋಮವಾರ ಬೆಳಿಗ್ಗೆ ಅದ್ವೇಷ್ಟಿಕಾ ಶಿಲಾ ಮುಹೂರ್ತ ಕಾರ್ಯಕ್ರಮ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಕೇಶವ ತಂತ್ರಿ ಆಚಾರ್ಯತ್ವದಲ್ಲಿ ಸುರತ್ಕಲ್ ಮುಂಚೂರು ಶಿಲ್ಪಿ ಉಮೇಶ ಆಚಾರ್ಯ ಉಪಸ್ಥಿತಿ, ನಿರ್ದೇಶನದೊಂದಿಗೆ ಜರುಗಿತು. ಶಿಲಾಶಿಲ್ಪಿ ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ, ಸುಧೀರ ಆಚಾರ್ಯ ಬುಕ್ಕಿಗುಡ್ಡೆ ಪೆರ್ಡೂರು, ಕಾಷ್ಠ ಶಿಲ್ಪಿ ಶಿವಪ್ರಸಾದ ಆಚಾರ್ಯ ಅಶ್ವತ್ಥಪುರ, ಎಂಜಿನಿಯರ್ ಗುರುಪ್ರಸಾದ ಆಚಾರ್ಯ ಮಂಗಳೂರು, ಶ್ರೀ ಗುರುಮಠ ಕಾಳಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಯೋಗೀಶ ಆಚಾರ್ಯ, ಕಾಳಕಾಂಬಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಆಚಾರ್ಯ ಬೆಳಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ಕಸ್ತೂರಿ ದೇವರಾಜ ಆಚಾರ್ಯ, ಕೊಡ್ಯಡ್ಕ ಪ್ರಭಾಕರ ಆಚಾರ್ಯ ದಂಪತಿ, ಮೋಹನ ಆಚಾರ್ಯ ದಂಪತಿ, ಚಿನ್ನದ ಕೆಲಸಗಾರರ ಹಿತರಕ್ಷಣಾ ಸಮಿತಿ, ಗುರುಕಾಷ್ಠಶಿಲ್ಪ ಸಮಿತಿ, ಭಜನ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ವೈದಿಕ ವೃಂದದವರು, ಕ್ಷೇತ್ರದ ಭಕ್ತಾದಿಗಳು ಪಾಲ್ಗೊಂಡರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಧನಂಜಯ ಪಾಲ್ಕಿ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಪವರ್ ಫ್ರೆಂಡ್ಸ್ ಕುಟುಂಬ ಸಮ್ಮಿಲನ: ಆಮಂತ್ರಣ ಪತ್ರಿಕೆ ಬಿಡುಗಡೆ- ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ‘ಪವರ್ ಫ್ರೆಂಡ್ಸ್ ಪ್ರಶಸ್ತಿ’ ಪ್ರದಾನ ಸಮಾರಂಭವು ಪ್ರೀತಮ್ ಸಭಾಭವನದಲ್ಲಿ ನಡೆಯಿತು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.