ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನಬೆಟ್ಟಿನಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ಮನೆಗಳಿಗೆ ಹಾಗೂ ಕೃಷಿ ತೋಟಗಳಿಗೆ ಅಪಾರ ಹಾನಿಯುಂಟಾಗಿದೆ.
ಗ್ರಾಮದ ಅಸ್ರಣ್ಣ ಅನಂತ ಅಸ್ರಣ್ಣ ಅವರ ಮನೆಯ ತೋಟದಲ್ಲಿ ಹೆಚ್ಚಿನ ಸಂಖ್ಯೆಯ ತೆಂಗು ಮತ್ತು ಅಡಿಕೆ ಮರಗಳು ಗಾಳಿಗೆ ಧರೆಗುರುಳಿವೆ. ಪಂಚಾಯತ್ ಮಾಜಿ ಅಧ್ಯಕ್ಷೆ ಸಂಜೀವಿ ಪೂಜಾರಿ ಅವರ ಮನೆಯ ಮಾಡು ಹಾನಿಗೊಳಗಾಗಿದ್ದು, ಮುರಗೋಳಿ ಪ್ರದೇಶದಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ಭಾಗದ ವಿವಿಧೆಡೆ ಕೃಷಿ, ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾದ ವರದಿಯಾಗಿದೆ. ವಿಷಯ ತಿಳಿದ ಪಂಚಾಯತ್ ಮಾಜಿ ಸದಸ್ಯ ರಮೇಶ್ ಶೆಟ್ಟಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪಡುಮಾರ್ನಾಡಿನಲ್ಲಿ ಗಾಳಿ ಮಳೆ ಅಬ್ಬರ: ಕೃಷಿ ನಾಶ, ಮನೆಗಳಿಗೆ ಹಾನಿ
ಪಡುಮಾರ್ನಾಡಿನಲ್ಲಿ ಗಾಳಿ ಮಳೆ ಅಬ್ಬರ: ಕೃಷಿ ನಾಶ, ಮನೆಗಳಿಗೆ ಹಾನಿ