ಮೂಡುಬಿದಿರೆ: ಕೇಂದ್ರದ ಲೋಕಸೇವಾ ಆಯೋಗದ ಮೂಲಕ ನಡೆಯುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಾದ ವಿವೇಕ್ ಎ, ಅದ್ವೆತ್ ವಿಕ್ರಾಂತ್ ಶೆಂಡೆ, ಅಮೋಘ್ ನಾಗರಾಜ್ ಬಿಲ್ಲೂರ್, ಮೊಹಮ್ಮದ್ ಯೂಸುಫ್ ನಿಸಾರ್ ಶೇಖ್, ಸಾಯೀಶ್ ಪ್ರಶಾಂತ್ ತಾಳೇಕರ್, ಪ್ರಹ್ಲಾದ್ ದತ್ತ ದೇಸಾಯಿ, ಸಂಹಿತ್ ವಿ.ರಾವ್, ಹರ್ಷ ಎಂ., ಕೃತಿಕ್ ಬಿ, ಪ್ರಣವ್ ಎನ್ ಪಂಡಿತ್, ವಿಜಯಕುಮಾರ್ ಸಂಗಯ್ಯ ಚಿಕ್ಕಮಠ, ಪಿಯೂಷ್ ಎಚ್, ಶ್ರೇಯಸ್ ಸಿ ಕಬ್ಬಿನಕಂತಿಮಠ, ಭರತೇಶ್ ನಾಗೇಶ್ ಮೊಗೇರ್, ಚಿನ್ಮಯ್ ಎಸ್, ಸಂಕೇತ್ ಭಟ್, ಸುಮಿತ್ ವಿ ಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್ ಜೆ, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್ ಕೆ, ಪಿಯೂಷ್ ಎಚ್, ವಿಸ್ಮಯ್ ನಾರಾಯಣ್ ನಾಡಿಗ್, ಮೆಲ್ರಾಯ್ ಕ್ಯಾಸ್ಟೆಲಿನೋ, ಇಶಾನ್ ಉತ್ತೀರ್ಣರಾಗಿದ್ದಾರೆ.

ಆಳ್ವಾಸ್‌ನಲ್ಲಿ ಎನ್‌ಡಿಎ ಪರೀಕ್ಷೇಗಾಗಿ ವಿಶೇಷ ತರಬೇತಿ ಆಳ್ವಾಸ್‌ನಲ್ಲಿ ಎನ್‌ಡಿಎ ತರಬೇತಿಗೆ ವಿಶೇಷ ಮಹತ್ವ ನೀಡಲಾಗುತ್ತಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನೂ ಸಮನ್ವಯಗೊಳಿಸಲಾಗಿದೆ. ಎನ್‌ಡಿಎ ಪರೀಕ್ಷೆಯ ಗಣಿತ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಹಾಗೂ ತಾರ್ಕಿಕ ಚಿಂತನೆ ವಿಭಾಗಗಳಿಗೆ ಅನುಭವಸಂಪನ್ನ ಉಪನ್ಯಾಸಕರು ತರಬೇತಿ ನೀಡುತ್ತಾರೆ. ನಿಯಮಿತ ಮಾಕ್ ಟೆಸ್ಟ್ಗಳು, ಪ್ರಶ್ನಾಪತ್ರಿಕೆ ವಿಶ್ಲೇಷಣೆ, ಸಮಯ ನಿರ್ವಹಣೆ ಹಾಗೂ ವೈಯಕ್ತಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ದೈಹಿಕ ಕ್ಷಮತೆಯನ್ನು ವೃದ್ಧಿಸಲು ನಿಯಮಿತ ವ್ಯಾಯಾಮ, ಪೆರೇಡ್ ತರಬೇತಿ ಮತ್ತು ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ ಎಂದರು. ಪ್ರೋ ಮೊಹಮ್ಮದ್ ಸದಾಕತ್, ಸಂಯೋಜಕ ವರುಣ್ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಅಧಿಕಾರಿಗಳಾಗಲು ಎನ್‌ಡಿಎ ಪ್ರಮುಖ ಘಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಿದ್ಧಗೊಳಿಸುವ ಕಾರ್ಯವನ್ನು ಆಳ್ವಾಸ್‌ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಎನ್‌ಡಿಎ ಕನಸು ಕಾಣುವ ವಿದ್ಯಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ಮತ್ತು ಅತ್ಯುತ್ತಮ ತರಬೇತಿ ನೀಡುವ ಮೂಲಕ ರಾಷ್ಟ್ರ ಸೇವೆಗೆ ಯೋಗ್ಯ ಯುವಕರನ್ನು ರೂಪಿಸುತ್ತಿದೆ. -ಡಾ.ಎಂ ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ