ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್ ಆಯೋಜಿಸಿದ್ದ ಹಬ್ಬ ಹಬ್ಬಗಳ ಉತ್ಸವದ 10ನೇ ಹಂತ 1ನೇ ಡ್ರಾ ಕಾರ್ಯಕ್ರಮ ಮೂಡುಬಿದಿರೆ ಪ್ರೆಸ್ಟೀಜ್ ಟವರ್ ಶಾಖೆಯಲ್ಲಿ ಭಾನುವಾರ ನಡೆಯಿತು. 100 ದಿನ 100 ಬಹುಮಾನಗಳ ಸರಣಿಯ ಭಾಗವಾಗಿ ಆಯೋಜಿಸಲಾಗಿದ್ದ ಲಕ್ಕಿ ಡ್ರಾದಲ್ಲಿ ಹಲವಾರು ಅದೃಷ್ಟಶಾಲಿ ಗ್ರಾಹಕರು ಬಹುಮಾನಗಳನ್ನು ಗೆದ್ದುಕೊಂಡರು. ಗುರುವಾಯನಕೆರೆ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಷ್‌ಚಂದ್ರ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ, ಮೂಡುಬಿದಿರೆ ಮಿಡ್ ಟೌನ್ ರೋಟರಿ ಕ್ಲಬ್‌ನ ಪ್ರಶಾಂತ್ ಕೆ.ಭಂಡಾರಿ, ಎಂ.ಆರ್.ಪಿ.ಎಲ್ ಕಂಪನಿ ಸುರತ್ಕಲ್‌ನ ಉದ್ಯೋಗಿ ಅಭಿಷೇಕ್ ಶೆಟ್ಟಿ ಐಕಳ ಪಾಲ್ಗೊಂಡಿದ್ದರು. ಮೀನು ವ್ಯಾಪಾರಿ ಇಶಾಕ್, ಉದ್ಯಮಿ ಸುರೇಂದ್ರ, ಅಶೋಕ್ ಪೂಜಾರಿ ಇರುವೈಲ್, ಮುಂಬೈ ಉದ್ಯಮಿ ಸುಂದರ್ ಎಂ.ಪೂಜಾರಿ ಉಪಸ್ಥಿತರಿದ್ದರು. ಮೆಟಾಸಾಫ್ಟ್ನ ಸರಿತಾ ಪ್ರವೀಣ್, ಬಿಲ್ಡೆಕ್ಸ್ ಸ್ಟೀಲ್ಸ್ನ ಸುನೀಲ್ ಶೆಟ್ಟಿ, ಇಮಿಟೇಶನ್ ಜ್ಯುವೆಲ್ಲರಿ ಡಿಸೈನರ್ ಶಾರ್ಲಿನ್ ಗೋವ್ಸ್ ಶೆರಿನ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶೀನ ಮಾಸ್ತಿಕಟ್ಟೆ ಮುಖ್ಯ ಅತಿಥಿಗಳಾಗಿದ್ದರು. ಅಗರಿ ಸಂಸ್ಥೆಯ ಮಾಲೀಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ಇದೇ ವೇಳೆ ಅಗರಿ ಹಬ್ಬ ಹಬ್ಬಗಳ ಉತ್ಸವದ ಲಕ್ಕಿ ಡ್ರಾ ವಿಜೇತರಾದ ಅಬ್ದುಲ್ ಖಾಲಿಕ್ ಕಿಲ್ಪಾಡಿ, ನವೀನ್ ಉಲಿಯ ಅಲಂಗಾರು, ಹರ್ಷಿತ್ ಕಿನ್ನಿಗೋಳಿ, ಶಿರಿನ್ ಬಾನು ಬೆಳುವಾಯಿ, ಲೋಕೇಶ್ ಮಿಜಾರ್, ಸಂತೋಷ್ ಕಾಶಿಪಟ್ನ ಹಾಗೂ ಬಶೀರ್ ಪ್ರಾಂತ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಮೂಡುಬಿದಿರೆ ಶಾಖೆಯ ಸಂಚಾಲಕ ಅಗರಿ ವಾದಿರಾಜ್ ರಾವ್, ಮೆನೇಜರ್ ಸುನೀಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಪವರ್ ಫ್ರೆಂಡ್ಸ್ ಕುಟುಂಬ ಸಮ್ಮಿಲನ: ಆಮಂತ್ರಣ ಪತ್ರಿಕೆ ಬಿಡುಗಡೆ- ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ‘ಪವರ್ ಫ್ರೆಂಡ್ಸ್ ಪ್ರಶಸ್ತಿ’ ಪ್ರದಾನ ಸಮಾರಂಭವು ಪ್ರೀತಮ್ ಸಭಾಭವನದಲ್ಲಿ ನಡೆಯಿತು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.