ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮೂರನೇ ವಾರ್ಡ್ ವ್ಯಾಪ್ತಿಯ ಸ್ವರಾಜ್ಯ ಮೈದಾನದ ಬಳಿಯ ಪುತ್ತಿಗೆಮನೆ ನಿವಾಸಿ, ಪತ್ರಕರ್ತ ಧನಂಜಯ್ ನಿವಾಸದ ಮೇಲೆ ತೆಂಗಿನ ಮರ ಬಿದ್ದು ಭಾರೀ ಹಾನಿ ಸಂಭವಿಸಿದೆ. ಮೇ 12 ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಈಶಾನ್ಯ ಭಾಗದಲ್ಲಿದ್ದ ತೆಂಗಿನ ಮರ ಬುಡಸಮೇತ ಮನೆಗೆ ಅಪ್ಪಳಿಸಿದೆ. ಈ ಆಕಸ್ಮಿಕ ಘಟನೆಯಿಂದ ಮನೆಯ ಈಶಾನ್ಯ ಭಾಗದ ಒಳಾಂಗಣ ಹಾಗೂ ಹಂಚಿನ ಸೂರು ಸಂಪೂರ್ಣ ಜರ್ಜರಿತಗೊಂಡಿದ್ದು, ಮೂಲೆಮಾಡು ತೀವ್ರವಾಗಿ ಜಖಂಗೊಂಡಿದೆ. ಘಟನೆಯಿಂದ ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 2024ರ ಜುಲೈಯಲ್ಲಿ ಭಾರೀ ಗಾಳಿಗೆ ಸಂಪೂರ್ಣ ಮನೆ ನಾಶವಾಗಿತ್ತು.