ಮೂಡುಬಿದಿರೆ: ಪಡುಕೊಣಾಜೆಯ ಕೇವಲ ಮನೆಯಲ್ಲಿ ಮೇ 17ರಂದು ಸಂಜೆ 3:30ಕ್ಕೆ ಸಮವಸರಣ ಸಾಹಿತ್ಯ ವೇದಿಕೆಯ ಉದ್ಘಾಟನೆ ಮತ್ತು ಡಾ. ನಾ. ಮೊಗಸಾಲೆ ಅವರ 22ನೆಯ ಕೃತಿ ಹಾಗೂ 14ನೆಯ ಕವನ ಸಂಕಲನವಾದ ‘ಹೇ ರಾಮ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ. ಬಿ. ಜನಾರ್ದನ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಬಿ. ಪಿ. ಸಂಪತ್ ಕುಮಾರ್ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ವೇಣುಗೋಪಾಲ ಶೆಟ್ಟಿ ಶುಭಾಶಂಸನೆ ಮಾಡಲಿದ್ದು, ಕೃತಿಯ ಕರ್ತೃ ಡಾ. ನಾ. ಮೊಗಸಾಲೆ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಕವನ ವಾಚಿಸುವ ಮೂಲಕ ಕವನ ಸಂಕಲನವನ್ನು ಡಾ. ಡಿ. ವಿ. ಪ್ರಕಾಶ್, ಡಾ. ಸುಧಾರಾಣಿ, ಹರೀಶ್ ಟಿ. ಜಿ., ಡಾ. ರವಿಶಂಕರ್ ಜಿ. ಕೆ., ಕವಿತಾ ಕೂಡ್ಲು, ಅಭ್ಯುದಯ್ ಹಾಗೂ ಅಮೃತಾ ಬಿಡುಗಡೆ ಮಾಡಲಿದ್ದಾರೆ. ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಟಿ.ಎನ್. ಖಂಡಿಗೆ ಮತ್ತು ಕವಿತಾ ಕೂಡ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 17ರಂದು ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: ಡಾ. ನಾ. ಮೊಗಸಾಲೆಯವರ ‘ಹೇ ರಾಮ್’ ಕವನ ಸಂಕಲನ ಬಿಡುಗಡೆ
ಮೇ 17ರಂದು ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: ಡಾ. ನಾ. ಮೊಗಸಾಲೆಯವರ ‘ಹೇ ರಾಮ್’ ಕವನ ಸಂಕಲನ ಬಿಡುಗಡೆ